ಮುಂಬೈ: ಈ ಬಾರಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಸೀಸ್ ಮೂಲದ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ ಕೈ ಬಿಟ್ಟಿತ್ತು. ಇದು ಆರ್ ಸಿಬಿ ಕೈಗೊಂಡ ಅತ್ಯುತ್ತಮ ನಿರ್ಧಾರ ಎಂದು ಇದೀಗ ಅಭಿಮಾನಿಗಳು ಅಭಿನಂದಿಸುತ್ತಾರೆ. ಯಾಕೆ ಇಲ್ಲಿದೆ ನೋಡಿ ವಿವರ.
ಕಳೆದ ಸೀಸನ್ ನಲ್ಲಿ ಆರ್ ಸಿಬಿಯಲ್ಲಿದ್ದಾಗಲೇ ಆಸ್ಟ್ರೇಲಿಯಾ ಹೊಡೆಬಡಿಯ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಹೆಸರಿಗಷ್ಟೇ ಹೊಡೆಬಡಿಯ ಆಟಗಾರ. ಆದರೆ ಆರ್ ಸಿಬಿಗೆ ಅವರಿಂದ ಯಾವುದೇ ಉಪಯೋಗವಾಗಿರಲಿಲ್ಲ.
ಹೀಗಾಗಿ ಕಳೆದ ಬಾರಿ ಹರಾಜಿಗೆ ಮುನ್ನ ಮ್ಯಾಕ್ಸ್ ವೆಲ್ ರನ್ನು ರಿಲೀಸ್ ಮಾಡಿದಾಗ ಆರ್ ಸಿಬಿ ಅಭಿಮಾನಿಗಳೇ ಖುಷಿಪಟ್ಟಿದ್ದರು. ಇದೀಗ ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿರುವ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಮಾಡುತ್ತಿರುವ ಚಂದ ನೋಡಿ ಅವರನ್ನು ಕೈ ಬಿಟ್ಟದ್ದೇ ಒಳ್ಳೇದಾಯ್ತು ಎಂದು ಆರ್ ಸಿಬಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಪಂಜಾಬ್ ತಂಡದಲ್ಲೂ ಇದುವರೆಗೆ ಮ್ಯಾಕ್ಸ್ ವೆಲ್ ಹೇಳಿಕೊಳ್ಳುವಂತಹ ರನ್ ಗಳಿಸಿಲ್ಲ. ಇಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ 10 ಎಸೆತ ಎದುರಿಸಿ ಗಳಿಸಿದ್ದು ಕೇವಲ 7 ರನ್. ಪಂಜಾಬ್ ಇತ್ತೀಚೆಗಿನ ವರದಿ ಬಂದಾಗ 13 ಓವರ್ ಗಳಲ್ಲಿ 98 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಕುಂಟುತ್ತಿದೆ.
ಮ್ಯಾಕ್ಸ್ ವೆಲ್ ರ ಇಂದಿನ ಪ್ರದರ್ಶನ ನೋಡಿದ ಬಳಿಕ ಅಭಿಮಾನಿಗಳು ಆರ್ ಸಿಬಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿಮಗಿಂತ ನಮ್ಮ ದೇಶದ ದೇಶೀಯ ಆಟಗಾರರೂ ಆಡ್ತಾರೆ ಎನ್ನುತ್ತಿದ್ದಾರೆ.