ಬೆಂಗಳೂರು: ತಮ್ಮ ಕಾಲಿನ ನೋವಿನ ಮಧ್ಯೆಯೂ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ತಂಡಕ್ಕೆ ಬೆಂಬಲವನ್ನು ಸೂಚಿಸಲು ಪ್ರತೀ ಪಂದ್ಯಾಟದಲ್ಲೂ ಭಾಗವಹಿಸಿ, ಗಮನ ಸೆಳೆದಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ವಿಡಿಯೋ ವೈರಲ್ ಆಗಿದೆ. ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಾಟದ ಬಳಿಕ ವಿರಾಟ್ ಕೊಹ್ಲಿ ಅವರು ರಾಹುಲ್ ದ್ರಾವಿಡ್ ಅವರನ್ನು ಕೇರ್ ಮಾಡಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ತಮ್ಮ ತಂಡ ಸೋತ ಬಳಿಕ ರಾಹುಲ್ ದ್ರಾವಿಡ್ ಅವರು ಎದುರಾಳಿ ತಂಡವಾದ ಆರ್‌ಸಿಬಿ ಆಟಗಾರರನ್ನು ಅಭಿನಂದಿಸಲು ಗ್ರೌಂಡ್‌ಗೆ ಬಂದರು. ವಿರಾಟ್ ಕೊಹ್ಲಿಗೆ ಶುಭಕೋರಿ, ಇತರರನ್ನು ಅಭಿನಂದಿಸಲು ಕುಂಟುತ್ತಲೇ ರಾಹುಲ್ ದ್ರಾವಿಡ್ ಮುಂದಿನ ಹೆಜ್ಜೆ ಹಾಕಿದರು.
ಈ ವೇಳೆ ಕೊಹ್ಲಿ ನೀವ್ಯಾಕೆ ನಡೆಯುತ್ತೀರಿ, ನಮ್ಮ ಆಟಗಾರರೇ ನಿಮ್ಮ ಬಳಿ ಬರುತ್ತಾರೆ ಎಂದಿದ್ದಾರೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ದ್ರಾವಿಡ್ ಅವರ ಕ್ರೀಡಾ ಸ್ಫೂರ್ತಿ, ವಿರಾಟ್ ಕೊಹ್ಲಿ ಅವರು ಹಿರಿಯರಿಗೆ ನೀಡುವ ಗೌರವ, ಕಾಳಜಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.