ನವದೆಹಲಿ: ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ನೀರಾಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಗೆ ಬರುವಂತೆ ಒಲಿಂಪಿಕ್ ಚಾಂಪಿಯನ್ ಪಾಕ್‌ನ ಅರ್ಷದ್ ನದೀಮ್ ಅವರನ್ನು ಆಹ್ವಾನಿಸಿದ್ದಕ್ಕೆ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿದ್ದರು.
ಮೇ 24 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ಕಾರ್ಯಕ್ರಮಕ್ಕೆ ಅರ್ಷದ್ ಅವರನ್ನು ನೀರಜ್ ಚೋಪ್ರಾ ಅವರು ಆಹ್ವಾನಿಸಿದ್ದರು. ಇದೀಗ ಈ ವಿಚಾರಕ್ಕೆ ನೀರಜ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ದಾಳಿಯ ಮೊದಲೇ ಅರ್ಷಾದ್ ಅವರನ್ನು ಆಹ್ವಾನಿಸಲಾಗಿತ್ತು. ಈ ದುರಂತದ ಬಳಿಕ ಅರ್ಷದ್ ಭಾಗವಹಿಸುವಿಕೆಯು "ಸಂಪೂರ್ಣವಾಗಿ ಪ್ರಶ್ನೆಯಾಗಿ ಉಳಿದಿದೆ.
ನಾನು ಸಾಮಾನ್ಯವಾಗಿ ಕಡಿಮೆ ಪದಗಳ ಮನುಷ್ಯ, ಆದರೆ ಇದರರ್ಥ ನಾನು ತಪ್ಪು ಎಂದು ನಂಬುವದಕ್ಕೆ ವಿರುದ್ಧವಾಗಿ ಮಾತನಾಡುವುದಿಲ್ಲ-ವಿಶೇಷವಾಗಿ ನಮ್ಮ ದೇಶದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಕುಟುಂಬದ ಗೌರವ ಮತ್ತು ಗೌರವವನ್ನು ಪ್ರಶ್ನಿಸಲು ಬಂದಾಗ ಎಂದಿದ್ದಾರೆ.