Select Your Language

Notifications

webdunia
webdunia
webdunia
webdunia

RCB vs RR Match:ತವರಿನಲ್ಲಿ ಮೊದಲ ಬಾರಿ 200 ರನ್‌ಗಳ ಗಡಿ ದಾಟಿದ ಆರ್‌ಸಿಬಿ, ರಾಜಸ್ಥಾನ್‌ಗೆ ಬಿಗ್‌ ಟಾರ್ಗೆಟ್‌

ಆರ್‌ಸಿಬಿ vs ಆರ್‌ಆರ್‌ ಮ್ಯಾಚ್ ಲೈವ್

Sampriya

ಬೆಂಗಳೂರು , ಗುರುವಾರ, 24 ಏಪ್ರಿಲ್ 2025 (21:30 IST)
Photo Credit X
ಬೆಂಗಳೂರು: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮೊದಲ ಬಾರಿ ತವರಿನಲ್ಲಿ ಆರ್‌ಸಿಬಿ 200ರನ್‌ಗಳ ಗಡಿ ದಾಟಿ, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್‌ 2025ರ 42ನೇ ಪಂದ್ಯಾಟದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್‌ ಮುಖಾಮುಖಿಯಾಗುತ್ತಿದೆ.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್‌ ಅವರು ಮೊದಲು  ಫೀಲ್ಡಿಂಗ್ ಆಯ್ಡುಕೊಂಡು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ಉತ್ತಮ ಆರಂಭ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ(70), ಸಾಲ್ಟ್‌(26), ಪಡಿಕ್ಕಲ್(50), ಡೇವಿಡ್(32) ರಜತ್ ಪಟಿದಾರ್(1) ಜಿತೇಶ್ ಶರ್ಮಾ (20)ರನ್‌ಗಳೊಂದಿಗೆ ರಾಜಸ್ಥಾನ್ ರಾಯಲ್ಸ್‌ಗೆ 206ರನ್‌ಗಳ ಟಾರ್ಗೆಟ್ ನೀಡಿದೆ.

20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ಆರ್‌ಸಿಬಿ 205 ರನ್ ಗಳಿಸಿತು. ಈ ಮೂಲಕ ತವರಿನಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಬಿಗ್ ಟಾರ್ಗೆಟ್‌ ಅನ್ನು ಆರ್‌ಸಿಬಿ ನೀಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಈ ಮೂಲಕ ಮುರನೇ ಬಾರಿಯೂ ಆರ್‌ಸಿಬಿ ತವರಿನಲ್ಲಿ ಟಾಸ್‌ ಸೋತಿದೆ. ತವರಿನಲ್ಲಿ ಇದುವರೆಗೆ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ಹ್ಯಾಟ್ರಿಕ್ ಸೋಲು ಅನುಭವಿಸಿತು. ನಡೆದ 8 ಪಂದ್ಯಾಟಗಳಲ್ಲಿ ಆರ್‌ಸಿಬಿ 5ರಲ್ಲಿ ಗೆಲುವು ಸಾಧಿಸಿ, ತವರಿನಲ್ಲೇ ಮೂರು ಸೋಲು ಅನುಭವಿಸಿತು.

ಆರ್‌ಸಿಬಿ ಇದುವರೆಗೆ ನಡೆದ ಮೂರು ಪಂದ್ಯಾಟಗಳಲ್ಲೂ ಟಾಸ್‌ ಸೋತು, ಸೋಲು ಅನುಭವಿಸಿತು. ಇದೀಗ ನಾಲ್ಕನೇ ಬಾರಿಯೂ ಟಾಸ್ ಸೋತಿರುವುದರಿಂದ ಆರ್‌ಸಿಬಿ ಫ್ಯಾನ್ಸ್‌ಗೆ ಟೆನ್ಷನ್‌ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

RCB vs RR Match: ತವರಿನಲ್ಲಿ ನಾಲ್ಕನೇ ಬಾರಿ ಟಾಸ್ ಸೋತ ಆರ್‌ಸಿಬಿ, ಫ್ಯಾನ್ಸ್‌ಗೆ ಮುಗಿಯದ ಟೆನ್ಷನ್