Select Your Language

Notifications

webdunia
webdunia
webdunia
webdunia

Virat Kohli: ಶ್ರೇಯಸ್ ಅಯ್ಯರ್ ಎದುರು ಸಂಭ್ರಮಾಚರಿಸಿ ತಾವೇ ಇಕ್ಕಟ್ಟಿಗೆ ಸಿಲುಕಿದ ವಿರಾಟ್ ಕೊಹ್ಲಿ: ನಿಮ್ಗಿದು ಬೇಕಿತ್ತಾ

Shreyas Iyer-Kohli

Krishnaveni K

ಪಂಜಾಬ್ , ಸೋಮವಾರ, 21 ಏಪ್ರಿಲ್ 2025 (10:46 IST)
Photo Credit: X
ಪಂಜಾಬ್: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗೆದ್ದ ಬಳಿಕ ಎದುರಾಳಿ ನಾಯಕ ಶ್ರೇಯಸ್ ಅಯ್ಯರ್ ಎದುರು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಟಾಂಗ್ ಕೊಡುವಂತೆ ಸಂಭ್ರಮಾಚರಣೆ ಮಾಡಿದ್ದರು. ಆದರೆ ಕೊಹ್ಲಿಯ ವರ್ತನೆ ಈಗ ಅವರಿಗೇ ತಿರುಗುಬಾಣವಾಗಿದೆ.

ಬೆಂಗಳೂರಿನಲ್ಲಿ ಆರ್ ಸಿಬಿ ಸೋಲಿಸಿದ ಬಳಿಕ ಶ್ರೇಯಸ್ ಅಯ್ಯರ್ ಸೌಂಡೇ ಕೇಳಿಸ್ತಿಲ್ಲ ಎಂದು ಸನ್ನೆ ಮಾಡಿದ್ದಕ್ಕೆ ಕೊಹ್ಲಿ ನಿನ್ನೆ ಪಂಜಾಬ್ ನಲ್ಲಿ ಗೆದ್ದು ಆ ರೀತಿ ಸೆಲೆಬ್ರೇಷನ್ ಮಾಡಿದ್ದರು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿಗೆ ಶ್ರೇಯಸ್ ಮೊನ್ನೆ ಸೆಲೆಬ್ರೇಷನ್ ಮಾಡಿದ್ದು ಬೆಂಗಳೂರಿನಲ್ಲಲ್ಲ. ಹಳೆಯ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಮ್ಮ ಎದುರು ಕೊಹ್ಲಿ ಅಣಕಿಸುವಂತೆ ಸಂಭ್ರಮಿಸಿದ್ದಕ್ಕೆ ಶ್ರೇಯಸ್ ಸಿಟ್ಟಾಗಿದ್ದರು. ಕೊಹ್ಲಿ ಸಮಾಧಾನಿಸಲು ಪ್ರಯತ್ನಿಸಿದರೂ ಕೇಳಲಿಲ್ಲ. ಆದರೆ ಪಂದ್ಯದ ಬಳಿಕ ಶ್ರೇಯಸ್, ವಿರಾಟ್ ಬ್ಯಾಟಿಂಗ್ ನ್ನೂ ಹೊಗಳಿ ತಾವು ದೊಡ್ಡವರಾದರು.

ಆದರೆ ಕೊಹ್ಲಿ ಅಣಕಿಸುವಂತೆ ಸೆಲೆಬ್ರೇಷನ್ ಮಾಡಿ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಇಂತಹದ್ದೊಂದು ಅತಿರೇಕದ ಸೆಲೆಬ್ರೇಷನ್ ಬೇಕಿತ್ತಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rohit Sharma: ಏಯ್ ನಾನು ಔಟಲ್ಲ ಕಣೋ ನಾಟೌಟ್: ಮೈದಾನದಲ್ಲೇ ಜಡೇಜಾಗೆ ಗದರಿದ ರೋಹಿತ್ ಶರ್ಮಾ