ಪಂಜಾಬ್: ಐಪಿಎಲ್ 2025 ರಲ್ಲಿ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಿದ ಬಳಿಕ ಆರ್ ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ನಿಮ್ಮ ಮೈದಾನದಲ್ಲೇ ಗೆದ್ದಿದ್ದೇವೆ ನೋಡ್ಕೋ ಎಂಬಂತೆ ಶ್ರೇಯಸ್ ಅಯ್ಯರ್ ಗೆ ಸನ್ನೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಗೆದ್ದ ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಚಿನ್ನಸ್ವಾಮಿ ಪ್ರೇಕ್ಷಕರತ್ತ ಕಿವಿ ಹಿಡಿದುಕೊಂಡು ಯಾಕೆ ಸೌಂಡೇ ಇಲ್ಲ ಎಂಬಂತೆ ಸನ್ನೆ ಮಾಡಿದ್ದರು. ಇಂದು ಪಂಜಾಬ್ ನಲ್ಲೇ ಗೆದ್ದ ಬಳಿಕ ಕೊಹ್ಲಿ ಶ್ರೇಯಸ್ ಗೆ ತಿರುಗೇಟು ನೀಡಿದ್ದಾರೆ.
ಇಂದಿನ ಪಂದ್ಯದಲ್ಲಿ ಪಂಜಾಬ್ 158 ರನ್ ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಆರ್ ಸಿಬಿ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ವಿರಾಟ್ ಕೊಹ್ಲಿ ಅಜೇಯ 73 ರನ್ ಸಿಡಿಸಿದರು. ಗೆಲುವಿನ ಬಳಿಕ ಕ್ರೀಸ್ ನಲ್ಲಿ ನಿಂತು ಎದುರಲ್ಲೇ ಇದ್ದ ಶ್ರೇಯಸ್ ಅಯ್ಯರ್ ಗೆ ಸನ್ನೆ ಮಾಡಿ ಸಂಭ್ರಮಿಸಿದರು.
ಬಳಿಕ ಶ್ರೇಯಸ್ ಅಯ್ಯರ್ ಮುಖ ಪೆಚ್ಚಾಗಿದ್ದರೆ ಪಕ್ಕ ಬಂದು ತಾವೇ ಕೊಹ್ಲಿ ತಮ್ಮ ಸೆಲೆಬ್ರೇಷನ್ ಗೆ ಸಮರ್ಥನೆಯನ್ನೂ ಕೊಟ್ಟರು. ಇದನ್ನು ನೋಡಿದ ಅಭಿಮಾನಿಗಳು ಕೊಹ್ಲಿಯನ್ನು ಕೆಣಕಿದರೆ ಸುಮ್ನೇನಾ ಎಂದಿದ್ದಾರೆ.