ಬೆಂಗಳೂರು: ಪಂಜಾಬ್ ಕಿಂಗ್ಸ್‌ಅನ್ನು ಅದರ ತವರಿನಲ್ಲೇ ಮಣಿಸುವ ಮೂಲಕ ಆರ್‌ಸಿಬಿ ತಮ್ಮ ಸೇಡನ್ನು ತೀರಿಸಿಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧ ಆರ್‌ಸಿಬಿ ಹೀನಾಯ ಸೋಲು ಅನುಭವಿಸಿ, ಭಾರೀ ಟೀಕೆಗೆ ಗುರಿಯಾಯಿತು. ಇದೀಗ ಪಂಜಾಬ್ ತವರಲ್ಲೇ ಅದಕ್ಕೆ ತಕ್ಕ ಉತ್ತರವನ್ನು ಆರ್‌ಸಿಬಿ ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ನಾಯಕ ರಜತ್ ಪಡಿದಾರ್ ಅವರು ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಪಂಜಾಬ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
20 ಓವರ್‌ನಲ್ಲಿ ಪಂಜಾಬ್ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ, ಆರ್‌ಸಿಗೆ 158ರನ್ ಗೆಲುವಿನ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ಆಟಗಾರರು ಇನ್ನು 6 ಎಸೆತಗಳು ಬಾಕಿಯಿರುವಾಗ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಗಳಿಸಿತು.