Select Your Language

Notifications

webdunia
webdunia
webdunia
webdunia

IPL 2025: RCB ಫ್ಯಾನ್ಸ್ ಕೆಣಕಿದ ಶ್ರೇಯಸ್‌ ಅಯ್ಯರ್‌ಗೆ ಗೆಲುವಿನ ಮೂಲಕ ಕೊಹ್ಲಿ ಕೊಡುತ್ತಾರಾ ಕೌಂಟರ್‌

RCB vs PRBK Match, Virat Kohli, Shreyas Iyer

Sampriya

ಬೆಂಗಳೂರು , ಭಾನುವಾರ, 20 ಏಪ್ರಿಲ್ 2025 (17:50 IST)
Photo Credit X
ಬೆಂಗಳೂರು: ಐಪಿಎಲ್‌ ಪಂದ್ಯಾಟ 2025ರ ಇಂದಿನ ಪಂದ್ಯಾಟದಲ್ಲಿ ಆರ್‌ಸಿಬಿ ಗೆಲುವಿಗೆ ಪಂಜಾಬ್ ಕಿಂಗ್ಸ್‌ 157 ರನ್‌ಗಳ ಗೆಲುವಿನ ಗುರಿ ನೀಡಿದೆ.

ಇಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ, ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್‌ 6 ವಿಕೆಟ್ ಕಳೆದುಕೊಂಡು 20 ಓವರ್‌ಗಳಲ್ಲಿ 156 ರನ್‌ ಗಳಿಸಿತು.

ಈ ಹಿಂದಿನ ಪಂದ್ಯಾಟದಲ್ಲಿ ಆರ್‌ಸಿಬಿಯನ್ನು ತನ್ನ ತವರಿನಲ್ಲೇ ಪಂಜಾಬ್ ಸೋಲಿಸಿತು. ಇದೀಗ ಇಂದಿನ ಪಂದ್ಯಾಟದ ಮೂಲಕ ಆರ್‌ಸಿಬಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕಾದು ನೊಡಬೇಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ವೈಖರಿಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಸಾಕಷ್ಟು ಹಣ ನೀಡಿ ಪಂದ್ಯಾಟ ನೋಡಲು ಬಂದ ಅಭಿಮಾನಿಗಳು ಆರ್‌ಸಿಬಿ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಆರ್‌ಸಿಬಿ ವಿರುದ್ಧದ ಗೆಲುವಿನ ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ , ಆರ್‌ಸಿಬಿ ಅಭಿಮಾನಿಗಳ ಕೂಗಿಗೆ ತಮ್ಮ ಸನ್ನೆ ಮೂಲಕ ಕೌಂಟರ್ ಕೊಟ್ಟಿದ್ದರು. ಇದು ಬಾರೀ ವೈರಲ್ ಆಗಿತ್ತು. ಇದಕ್ಕೆ ಇಂದು ಆರ್‌ಸಿಬಿ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಕೌಂಟರ್ ಕೊಡುತ್ತಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದರು.  

ಈ ಮೂಲಕ ಅಭಿಮಾನಿಗಳ ಆಸೆಯನ್ನು ಆರ್‌ಸಿಬಿ ಆಟಗಾರರು ಈಡೇರಿಸುತ್ತಾರಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Vaibhav Suryavamshi: ಐಪಿಎಲ್‌ ಚೊಚ್ಚಲ ಪಂದ್ಯಾಟಕಕ್ಕಾಗಿ ಪಿಜ್ಜಾ, ಮಟನ್‌ಗೆ ಗುಡ್‌ಬೈ ಹೇಳಿದ ವೈಭವ್ ಸೂರ್ಯವಂಶಿ