ಬೆಂಗಳೂರು: ಇದುವರೆಗೂ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್‌ಸಿಬಿ ಈ ಆವೃತ್ತಿಯಲ್ಲಿ ಉತ್ತಮ ಪ್ರಾರಂಭವನ್ನು ಪಡೆದಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ ಇಂದು ತವರಿನಲ್ಲಿ ಪಂಜಾಬ್ ಅನ್ನು ಎದುರಿಸಲಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ನೀಡಿರುವ ಹೇಳಿಕೆ ವೈರಲ್ ಆಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾಧ್ಯಮದರು ಆರ್‌ಸಿಬಿ ಬಗ್ಗೆ ಹಾಗೂ ಆರ್‌ಸಿಬಿ ಈ ಬಾರಿಯಾದರೂ ಕಪ್ ಎತ್ತುತ್ತಾ ಎನ್ನುವ ಪ್ರಶ್ನೆ ಕೇಳಿದಾಗ, ಇದಕ್ಕೆ ಅವರು ಫನ್ ಆಗಿ ಉತ್ತರಿಸಿದ್ದಾರೆ.
ನಾವು ಈ ಸೀಸನ್ನಲ್ಲಿ ಇನ್ನೂ ಬೆಂಗಳೂರಲ್ಲಿ ಗೆದ್ದಿಲ್ಲ. ಕಪ್ ಎತ್ತುತ್ತೇವೆ ಎನ್ನಬೇಡಿ. ಹಾಗೆ ಹೇಳಿದಾಗಲೇ ನಾವು ಕಪ್ ಎತ್ತಿಲ್ಲ. ಐಪಿಎಲ್ ಚೆನ್ನಾಗಿ ನಡೆದುಕೊಂಡು ಬಂದಿದೆ ಎಂದಿದ್ದಾರೆ ಅವರು.
ಆರ್‌ಸಿಬಿ vs ಪಂಜಾಬ್ ವಿರುದ್ಧ ಪಂದ್ಯ ನಡೆಯುತ್ತಿದೆ. ನಾನು ಎರಡೂ ಟೀಂನಲ್ಲಿದ್ದೆ. ಸಮಸ್ಯೆ ಅದೇ ಎಂದು ಹೇಳಿದ್ದಾರೆ. ಹೀಗಾಗಿ, ಎರಡೂ ತಂಡಕ್ಕೆ ಅವರು ಇಂದಿನ ಪಂದ್ಯಾಟಕ್ಕೆ ಶುಭಕೋರಿದರು.