ಬೆಂಗಳೂರು: ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2025ರ 42ನೇ ಪಂದ್ಯಾಟದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರು ಮೊದಲು ಫೀಲ್ಡಿಂಗ್ ಆಯ್ಡುಕೊಂಡು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.
ಈ ಮೂಲಕ ಮುರನೇ ಬಾರಿಯೂ ಆರ್‌ಸಿಬಿ ತವರಿನಲ್ಲಿ ಟಾಸ್ ಸೋತಿದೆ. ತವರಿನಲ್ಲಿ ಇದುವರೆಗೆ ನಡೆದ ಪಂದ್ಯಾಟದಲ್ಲಿ ಆರ್‌ಸಿಬಿ ಹ್ಯಾಟ್ರಿಕ್ ಸೋಲು ಅನುಭವಿಸಿತು. ನಡೆದ 8 ಪಂದ್ಯಾಟಗಳಲ್ಲಿ ಆರ್‌ಸಿಬಿ 5ರಲ್ಲಿ ಗೆಲುವು ಸಾಧಿಸಿ, ತವರಿನಲ್ಲೇ ಮೂರು ಸೋಲು ಅನುಭವಿಸಿತು.
ಆರ್‌ಸಿಬಿ ಇದುವರೆಗೆ ನಡೆದ ಮೂರು ಪಂದ್ಯಾಟಗಳಲ್ಲೂ ಟಾಸ್ ಸೋತು, ಸೋಲು ಅನುಭವಿಸಿತು. ಇದೀಗ ನಾಲ್ಕನೇ ಬಾರಿಯೂ ಟಾಸ್ ಸೋತಿರುವುದರಿಂದ ಆರ್‌ಸಿಬಿ ಫ್ಯಾನ್ಸ್‌ಗೆ ಟೆನ್ಷನ್ ಶುರುವಾಗಿದೆ.