Select Your Language

Notifications

webdunia
webdunia
webdunia
webdunia

IPL 2025 RCB vs RR: ತವರಿನಲ್ಲಿ ಮಾನ ವಾಪಸ್ ಪಡೆಯಲು ಆರ್ ಸಿಬಿಗೆ ಇಂದು ಒಳ್ಳೆ ಚಾನ್ಸ್

RCB

Krishnaveni K

ಬೆಂಗಳೂರು , ಗುರುವಾರ, 24 ಏಪ್ರಿಲ್ 2025 (09:58 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ತವರಿನಲ್ಲಿ ಮೊದಲ ಗೆಲುವು ದಾಖಲಿಸಿ ಮಾನ ವಾಪಸ್ ಪಡೆಯಲು ಆರ್ ಸಿಬಿಗೆ ಇದು ಉತ್ತಮ ಅವಕಾಶವಾಗಿದೆ.

ಆರ್ ಸಿಬಿ ಈ ಐಪಿಎಲ್ ನಲ್ಲಿ ತವರಿನಲ್ಲಿ ಆಡಿದ ಮೂರೂ ಪಂದ್ಯಗಳನ್ನೂ ಸೋತು ಸುಣ್ಣವಾಗಿದೆ. ಪ್ರತೀ ಬಾರಿ ತಮ್ಮ ತಂಡ ಗೆಲ್ಲುತ್ತದೆ ಎಂದು ಮೈದಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬರುವ ಆರ್ ಸಿಬಿ ಫ್ಯಾನ್ಸ್ ಹಿಡಿಶಾಪ ಹಾಕಿಕೊಂಡು ಹೋಗುತ್ತಾರೆ.

ಇಂದು ರಾಜಸ್ಥಾನ್ ವಿರುದ್ಧ ಗೆಲ್ಲಲು ಆರ್ ಸಿಬಿಗೆ ಉತ್ತಮ ಅವಕಾಶವಿದೆ. ಯಾಕೆಂದರೆ ರಾಜಸ್ಥಾನ್ ತಂಡ ಈಗಾಗಲೇ ಸತತ ಸೋಲಿನಿಂದ ಕುಗ್ಗಿ ಹೋಗಿದೆ. ಇನ್ನೊಂದೆಡೆ ಗಾಯಗೊಂಡಿರುವ ನಾಯಕ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ.

ಹೀಗಾಗಿ ಆರ್ ಸಿಬಿಗೆ ಗೆಲ್ಲಲು ಉತ್ತಮ ಅವಕಾಶ ಸಿಕ್ಕಂತಾಗಲಿದೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದವನೇ ಬಾಸ್. ಇಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ಹೀಗಾಗಿ ಇಂದು ನಾಯಕ ರಜತ್ ಪಾಟೀದಾರ್ ಟಾಸ್ ಗೆಲ್ಲಲಿ ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Jasprit Bumrah: ಕೆಳಗೆ ಬಿದ್ದು ಚಡಪಡಿಸುತ್ತಿದ್ದರೂ ಅಭಿನವ್ ಮನೋಹರ್ ಕಡೆ ತಿರುಗಿಯೂ ನೋಡದ ಜಸ್ಪ್ರೀತ್ ಬುಮ್ರಾ