Select Your Language

Notifications

webdunia
webdunia
webdunia
webdunia

ಚಿನ್ನದ ಹುಡುಗ ನದೀಮ್‌ಗೆ ಪಾಕ್‌ನ ಎರಡನೇ ಅತ್ಯುತ್ತಮ ಪ್ರಶಸ್ತಿ

Arshad Nadeem

Sampriya

ನವದೆಹಲಿ , ಭಾನುವಾರ, 11 ಆಗಸ್ಟ್ 2024 (11:23 IST)
Photo Courtesy X
ನವದೆಹಲಿ: ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್‌ಗೆ ಪಾಕ್‌ ಸರ್ಕಾರ ದೇಶದ ಎರಡನೇ ಅತ್ಯುತ್ತಮ ಪ್ರಶಸ್ತಿ ನೀಡಲಿದೆ.

 ಪಾಕಿಸ್ತಾನ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಹಿಲಾಲ್-ಎ-ಇಮ್ತಿಯಾಜ್ ಅನ್ನು ನದೀಮ್‌ಗೆ ನೀಡಲಿದೆ. ಪ್ಯಾರಿಸ್‌ನಲ್ಲಿ ಅವರ ಅದ್ಭುತ ಪ್ರದರ್ಶನಗೆ ಈ ಪ್ರಶಸ್ತಿಯನ್ನು ನೀಡಲು ಪಾಕ್ ನಿರ್ಧರಿಸಿದೆ.

 ಪಾಕ್‌ನ ನದೀಮ್ ಅವರು 92.97 ಮೀಟರ್ ಎಸೆದು ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

"ಕ್ರೀಡಾ ಕ್ಷೇತ್ರದಲ್ಲಿ ನದೀಮ್ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿಗಳು ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ" ಎಂದು ಐವಾನ್-ಎ-ಸದರ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಭಾರತದ ನೀರಜ್ ಚೋಪ್ರಾ ಅವರು 89.45 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ತಮ್ಮ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಅವರ ಎರಡನೇ ಪ್ರಯತ್ನದಲ್ಲಿ ಬಲವಾದ ಪ್ರದರ್ಶನದ ಹೊರತಾಗಿಯೂ, ಅವರು ಸತತ ನಾಲ್ಕು ಫೌಲ್ ಥ್ರೋಗಳೊಂದಿಗೆ ಹೋರಾಡಿದರು, ಇದು ಚಿನ್ನ ಗೆಲ್ಲುವುದನ್ನು ತಡೆಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಮಲೆನಾಡಿಗೂ ವಿಸ್ತರಿಸಿದ ಕರಾವಳಿ ಕಂಬಳ: ಘಟ್ಟ ಏರಲು ಸಜ್ಜಾದ ಓಟದ ಕೋಣಗಳು