Select Your Language

Notifications

webdunia
webdunia
webdunia
webdunia

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಆಸೆ: ಕುಸ್ತಿಪಟು ರಿತಿಕಾ ಹೂಡ ಕ್ವಾರ್ಟರ್ ಫೈನಲ್ ಗೆ

Reetika Hooda

Krishnaveni K

ಪ್ಯಾರಿಸ್ , ಶನಿವಾರ, 10 ಆಗಸ್ಟ್ 2024 (16:16 IST)
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ಇಂದು ಕೊನೆಯ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದು, ಮಹಿಳೆಯರ 76 ಕೆ.ಜಿ. ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ರಿತಿಕಾ ಹೂಡ ಕ್ವಾರ್ಟರ್ ಫೈನಲ್ ಗೇರಿದ್ದಾರೆ.

ಹಂಗೇರಿಯ ನ್ಯಾಗಿ ಬರ್ನಡೆಟ್ಟೆ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ರಿತಿಕಾ ಕ್ವಾರ್ಟರ್ ಫೈನಲ್ ಗೇರಿದ್ದಾರೆ. ಇದೀಗ ಪದಕ ಗೆಲ್ಲಲು ಅವರ ಮುಂದೆ ಎರಡೇ ಹೆಜ್ಜೆ ಬಾಕಿಯಿದೆ. ಆದರೆ ಕ್ವಾರ್ಟರ್ ಫೈನಲ್ ನಲ್ಲಿ ಅವರಿಗೆ ಪ್ರಬಲ ಎದುರಾಳಿ ಎದುರಾಗಲಿದ್ದಾರೆ. ಅಗ್ರ ಶ್ರೇಯಾಂಕಿತೆ ಕೈಝಿ ಐಪೆರಿ ವಿರುದ್ಧ ರಿತಿಕಾ ಕ್ವಾರ್ಟರ್ ಫೈನಲ್ ನಲ್ಲಿ ಆಡಲಿದ್ದಾರೆ.

ಟೆಕ್ನಿಕಲ್ ಸುಪೀರಿಯಾರಿಟಿ ಮೂಲಕ ರಿತಿಕಾ 12-2 ಅಂಕಗಳಿಂದ ಹಂಗೇರಿಯ ಎದುರಾಳಿಯನ್ನು ರಿತಿಕಾ ಸೋಲಿಸಿಬಿಟ್ಟರು. ನ್ಯಾಗಿ ಕೊಂಚ ಏಕಾಗ್ರತೆ ಕಳೆದುಕೊಂಡಂತೆ ಕಂಡುಬಂದರು. ಎರಡೆರಡು ತಪ್ಪುಗಳನ್ನು ಸತತವಾಗಿ ಮಾಡುವ ಮೂಲಕ ರಿತಿಕಾಗೆ ಅಂಕ ಬಿಟ್ಟುಕೊಟ್ಟರು.

ಆದರೆ ಕ್ವಾರ್ಟರ್ ಫೈನಲ್ ಪಂದ್ಯ ರಿತಿಕಾಗೆ ಅಷ್ಟು ಸುಲಭವಲ್ಲ. ಈ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ್ತಿಯನ್ನು ಸೋಲಿಸಿದರೆ ಅದು ದೊಡ್ಡ ಯಶಸ್ಸಾಗಲಿದೆ. ಇನ್ನೊಂದೆಡೆ ಕನ್ನಡತಿ ಅದಿತಿ ಅಶೋಕ್ ಮತ್ತು ದೀಕ್ಷಾ ಡಾಗರ್ ಕೂಡಾ ಗಾಲ್ಫ್ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಾ ಕಣದಲ್ಲಿದ್ದು, ಇಂದು ಅವರಿಂದಲೂ ಪದಕ ಬಂದರೆ ಅದು ಭಾರತದ ಪಾಲಿಗೆ ದೊಡ್ಡ ಬೂಸ್ಟ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಜೊತೆ ನನ್ನ ಹೋಲಿಸಬೇಡಿ: ಸ್ಮೃತಿ ಮಂಧಾನಾ ಖಡಕ್ ಹೇಳಿಕೆ