ಬೆಂಗಳೂರು: ಐಪಿಎಲ್ 2025 ರಲ್ಲಿ ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಆರ್ ಸಿಬಿ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಮೈದಾನಕ್ಕೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬಂದಿದ್ದರು. ತಮ್ಮ ತವರು ಹೈದರಾಬಾದ್ ಬಿಟ್ಟು ಸಿಂಧು ಆರ್ ಸಿಬಿಗೆ ಸಪೋರ್ಟ್ ಮಾಡುತ್ತಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ನಿನ್ನೆಯ ಪಂದ್ಯವನ್ನು ಆರ್ ಸಿಬಿ ರೋಚಕವಾಗಿ 11 ರನ್ ಗಳಿಂದ ಗೆದ್ದುಕೊಂಡಿತ್ತು. ಸತತವಾಗಿ ಚಿನ್ನಸ್ವಾಮಿಯಲ್ಲಿ ನಾಲ್ಕು ಪಂದ್ಯ ಸೋತ ಬಳಿಕ ನಿನ್ನೆಯ ಪಂದ್ಯವನ್ನು ಆರ್ ಸಿಬಿ ಗೆದ್ದಿದ್ದು ವಿಶೇಷವಾಗಿತ್ತು.
ಸತತವಾಗಿ ಆರ್ ಸಿಬಿ ಸೋತಿದ್ದರೂ ನಿನ್ನೆಯ ಪಂದ್ಯಕ್ಕೂ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಕೊರತೆಯಾಗಿರಲಿಲ್ಲ. ಇವರ ನಡುವೆ ಪಿವಿ ಸಿಂಧು ಕೂಡಾ ತಮ್ಮ ಗೆಳತಿಯರೊಂದಿಗೆ ಆರ್ ಸಿಬಿ ಬ್ಯಾನರ್ ಹಿಡಿದುಕೊಂಡು ಗ್ಯಾಲರಿಯಲ್ಲಿ ಕೂತು ಚಿಯರ್ ಮಾಡಿದ್ದಾರೆ.
ಪಿವಿ ಸಿಂಧು ಪತಿ ವೆಂಕಟದತ್ತ ಸಾಯಿ ಮೂಲತಃ ಬೆಂಗಳೂರಿನಲ್ಲೇ ಓದಿ ಬೆಳೆದವರು. ಹೀಗಾಗಿ ಪತಿಯ ಊರಿನ ತಂಡಕ್ಕೇ ಸಪೋರ್ಟ್ ಮಾಡ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.