Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಯೋಗ ದಿನ ಹುಟ್ಟಿಕೊಂಡಿದ್ದು ಹೇಗೆ

Yoga

Krishnaveni K

ಬೆಂಗಳೂರು , ಶುಕ್ರವಾರ, 21 ಜೂನ್ 2024 (09:02 IST)
ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಪ್ರಪಂಚದಾದ್ಯಂತ ಯೋಗ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಯೋಗ ದಿನ ಹುಟ್ಟಿಕೊಂಡಿದ್ದು ಯಾವಾಗ, ಹೇಗೆ ಎಂಬ ಮಾಹಿತಿ ಇಲ್ಲಿದೆ.

ವಿಶ್ವಕ್ಕೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವೂ ಒಂದು. ನಮ್ಮ ಪ್ರಾಚೀನ ಕಾಲದಲ್ಲೇ ಋಷಿ ಮುನಿಗಳು ಯೋಗದ ಮೂಲಕ ಆರೋಗ್ಯ, ದೇವರ ಸಾನಿಧ್ಯ ಪಡೆಯುತ್ತಿದ್ದರು. ಇದು ಭಾರತದ ಹೆಮ್ಮೆಯ ಪರಂಪರೆಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತದೆ.

ಯೋಗ ದಿನಾಚರಣೆ ಘೋಷಣೆಯಾಗಿದ್ದು 2014 ರ ಸೆಪ್ಟೆಂಬರ್ 27 ರಂದು. ಆಗಷ್ಟೇ ಭಾರತದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ಕರೆ ನೀಡಿದ್ದರು. ಅದಕ್ಕೆ ವಿಶ್ವಸಂಸ್ಥೆಯೂ ಅನುಮೋದಿಸಿತ್ತು. ಹೀಗಾಗಿ ಅಂದಿನಿಂದ ಜೂನ್ 21 ರಂದು ಯೋಗ ದಿನವಾಗಿ ಆಚರಿಸಲಾಗುತ್ತದೆ.

ತಾವು ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಪ್ರಧಾನಿ ಮೋದಿ ಪ್ರತೀ ಬಾರಿಯೂ ಒಂದೊಂದು ಕಡೆ ಯೋಗ ಮಾಡಿ ಗಮನ ಸೆಳೆಯುತ್ತಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಯೋಧರು ಸೇರಿದಂತೆ ಎಲ್ಲಾ ವರ್ಗದವರು ಯೋಗ ಮಾಡುವ ಮೂಲಕ ಇಂದಿನ ದಿನವನ್ನು ಅರ್ಥಪೂರ್ಣವಾಗಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಸಂಗೀತ ದಿನ 2024: ಸಂಗೀತದಿಂದ ಆಗುವ ಅದ್ಭುತ ಪ್ರಯೋಜನಗಳು