ಬೆಂಗಳೂರು: ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ತೆಳ್ಳಗೆ ಬಳುಕುವ ಸೊಂಟ ತಮ್ಮದಾಗಬೇಕೆಂಬ ಆಸೆಯಿರುತ್ತದೆ. ಸೊಂಟದ ಭಾಗ ದಪ್ಪಗಿದ್ದರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಚಿಂತೆಯಿರುತ್ತದೆ. ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಯಾವ ಯೋಗಾಸನ ಸೂಕ್ತ ನೋಡೋಣ. 
									
			
			 
 			
 
 			
			                     
							
							
			        							
								
																	ಯೋಗಾಸನದಲ್ಲಿ ಪ್ರತಿಯೊಂದಕ್ಕೂ ಪರಿಹಾರವಿದೆ. ಅದರಲ್ಲೂ ಶರೀರದ ಯಾವುದೇ ಭಾಗದ ಕೊಬ್ಬು ಕರಗಿಸಲು, ದೇಹ ಆರೋಗ್ಯವಂತವಾಗಿರಲು ಯೋಗಾಸನವೇ ಸೂಕ್ತ. ಬೆಲ್ಲಿ ಫ್ಯಾಟ್, ದಪ್ಪಗಿನ ಸೊಂಟ ತೆಳ್ಳಗಾಗಿಸಲು ಸೂಕ್ತ ಯೋಗಾಸನಗಳಿದ್ದು, ನಿಯಮಿತವಾಗಿ ಅವುಗಳನ್ನು ಮಾಡುತ್ತಿದ್ದರೆ ದೇಹದ ಭಾಗ ತೆಳ್ಳಗಾಗುತ್ತದೆ. ಇದಕ್ಕೆ ಪ್ರಮುಖವಾಗಿ ತ್ರಿಕೋನಾಸನ ಮಾಡಬೇಕು. ಅದನ್ನು ಮಾಡುವ ವಿಧಾನ ಇಲ್ಲಿದೆ.
									
										
								
																	
	- 
		ನಿಮ್ಮ ಎರಡೂ ಕಾಲಗಳ ನಡುವೆ 3 ಅಡಿ ಅಂತರವಿರುವಂತೆ ನೋಡಿಕೊಂಡು ನಿಂತುಕೊಳ್ಳಿ. ಮೊಣಕಾಲು ನೇರವಾಗಿರಬೇಕು.
 
	- 
		ಎರಡೂ ಕಾಲುಗಳಿಗೆ ಸಮಾನ ರೀತಿಯಲ್ಲಿ ಭಾರ ನೀಡಬೇಕು
 
	- 
		ಈಗ ಆಳವಾಗಿ ಉಸಿರಾಡುತ್ತಾ ದೇಹವನ್ನು ಬಲಭಾಗಕ್ಕೆ ಸೊಂಟದಿಂದ ಕೆಳಗೆ ಬಾಗಿಸಿ. ಈ ಸಂದರ್ಭದಲ್ಲಿ ನಿಮ್ಮ ಬಲಕೈ ಕೆಳಕ್ಕೆ ಮತ್ತು ಎಡಗೈ ಮೇಲಕ್ಕೆ ಎತ್ತಿರಬೇಕು.
 
	- 
		ಸೊಂಟವನ್ನು ನೇರವಾಗಿರಿಸಿ
 
	- 
		ಈಗ ನಿಮ್ಮ ಬಲಕೈಯನ್ನು ಪಾದದ ಮೇಲೆ ಇರಿಸಿ ಎಡಗೈಯನ್ನು ಮೇಲೆ ಎತ್ತಿ ನೇರವಾಗಿ ಹಿಡಿಯಿರಿ.
 
	- 
		ದೇಹ ಹಿಗ್ಗಿಸಿ ಆಳವಾದ ಉಸಿರು ಎಳೆದುಕೊಳ್ಳಿ.
 
	- 
		ಈ ಭಂಗಿಯನ್ನು 20-25 ಬಾರಿ ಮಾಡಿದ ಬಳಿಕ ದೇಹಕ್ಕೆ ವಿಶ್ರಾಂತಿ ನೀಡಿ.
 
ಇದೇ ಭಂಗಿಯನ್ನು ನಿಯಮಿತವಾಗಿ ಮಾಡುತ್ತಿದ್ದರೆ ಸೊಂಟದ ಭಾಗದ ಕೊಬ್ಬು ಕರಗುವುದಲ್ಲದೆ, ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ. ಇದರಿಂದ ಸೊಂಟ ತೆಳ್ಳಗಾಗುವುದರ ಜೊತೆಗೆ ಆರೋಗ್ಯವಾಗಿರುತ್ತೀರಿ.