ಬೆಂಗಳೂರು: ಇನ್ನೇನು ಬೇಸಿಗೆ ಮುಗಿದು ಮಳೆಗಾಲ ಶುರುವಾಗಲು ಕೆಲವೇ ದಿನ ಬಾಕಿಯಿದೆ. ಈಗಾಗಲೇ ಹಲವೆಡೆ ಮಳೆ ಬಂದು ಸೊಳ್ಳೆ ಕಾಟವೂ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳು ಬರುವುದು ಸರ್ವೇ ಸಾಮಾನ್ಯ.
ಸೊಳ್ಳೆಗಳಿಂದ ಬರುವ ಜ್ವರಗಳಲ್ಲಿ ಪ್ರಮುಖವಾದುದು ಮಲೇರಿಯಾ ಜ್ವರ. ತೀವ್ರ ಜ್ವರ, ಸುಸ್ತು, ವಾಂತಿ, ತಲೆನೋವು ಇದರ ಪ್ರಮುಖ ಲಕ್ಷಣಗಳು. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯದೇಹೋದಲ್ಲಿ ಮಲೇರಿಯಾ ಮಾರಣಾಂತಿಕವಾಗಬಹುದು. ಹಾಗಿದದರೆ ಮಲೇರಿಯಾ ಬರದಂತೆ ತಡೆಯಲು ಏನಿದೆ ಟಿಪ್ಸ್ ಇಲ್ಲಿ ನೋಡಿ.
ಲಸಿಕೆ ಪಡೆದುಕೊಳ್ಳಿ: ವಿಪರೀತ ಸೊಳ್ಳೆ, ಕಲ್ಮಶಗಳಿರುವ ಜಾಗದಲ್ಲಿ ಅನಿವಾರ್ಯವಾಗಿ ಇರಬೇಕಾದಲ್ಲಿ ಮಲೇರಿಯಾ ತಡೆಗೆ ಲಸಿಕೆ ಅಥವಾ ಮಾತ್ರಗಳನ್ನು ತೆಗೆದುಕೊಳ್ಳಿ
ಸೊಳ್ಳೆ ಕಾಟ: ಮೊದಲೇ ಹೇಳಿದಂತೆ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ. ಹೀಗಾಗಿ ಮನೆ ಸುತ್ತ ಸೊಳ್ಳೆ ಹುಟ್ಟಲು ಅವಕಾಶ ಕೊಡಬೇಡಿ. ಕೊಳಚೆ ನೀರು ಇಲ್ಲದಂತೆ ನೋಡಿಕೊಳ್ಳಿ
ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ: ಸೊಳ್ಳೆ ಕಡಿಯದಂತೆ ಆದಷ್ಟು ಸಾಕ್ಸ್, ಉದ್ದನೆಯ ಕೈ ಬಟ್ಟೆಗಳನ್ನು ಹಾಕಿಕೊಂಡು ಸ್ವಯಂ ರಕ್ಷಣೆ ಮಾಡಿಕೊಳ್ಳಿ
ಸೊಳ್ಳೆಗಳ ಸ್ಪ್ರೇ ಬಳಸಿ: ಸಂಜೆ ಹೊತ್ತು ಮನೆಯಲ್ಲಿ ಸೊಳ್ಳೆ ಸ್ಪ್ರೇ ಅಥವಾ ಬತ್ತಿ ಹಚ್ಚಿ ಸೊಳ್ಳೆಗಳು ಬಾರದಂತೆ ನೋಡಿಕೊಳ್ಳಿ