ಬೆಂಗಳೂರು: ಬೆಳಗಿನ ಹೊತ್ತು ಜಾಗಿಂಗ್ ಮಾಡುವುದು ಉತ್ತಮ ಎಂದು ಅನೇಕ ಆರೋಗ್ಯ ತಜ್ಞರೇ ಹೇಳುತ್ತಾರೆ. ಆದರೆ ಬಳಗಿನ ಹೊತ್ತು ವಾಕಿಂಗ್ ಮಾಡುವುದರಿಂದ ಕೆಲವು ಅಡ್ಡಪರಿಣಾಮಗಳೂ ಇವೆ. ಅವೇನೆಂದು ನೋಡೋಣ.
ಜಾಗಿಂಗ್ ಮಾಡುವುದು ದೈಹಿಕ ಆರೋಗ್ಯಕ್ಕೆ ಉತ್ತಮ. ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ, ದೈಹಿಕವಾಗಿ ಬಲಾಢ್ಯರಾಗಲು, ಜೀರ್ಣಕ್ರಿಯೆ ಸುಧಾರಿಸಲು ಜಾಗಿಂಗ್ ಮಾಡುವುದು ಉತ್ತಮ. ಆದರೆ ಬೆಳಗಿನ ಹೊತ್ತು ಜಾಗಿಂಗ್ ಮಾಡುವುದು ಎಲ್ಲರಿಗೂ ಆಗಿಬರುವುದಿಲ್ಲ. ಇದರಿಂದ ಕೆಲವು ಅಡ್ಡಪರಿಣಾಮಗಳೂ ಆಗುತ್ತವೆ.
ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ನಾವು ದೈಹಿಕವಾಗಿ ಹೆಚ್ಚು ಸಮರ್ಥರಿರುವುದಿಲ್ಲ. ಆಗ ವೀಕ್ನೆಸ್ ನಿಂದಾಗಿ ತಲೆ ಸುತ್ತು, ಬಳಲಿಕೆ ಕಂಡುಬರಬಹುದು. ಕೆಲವರಿಗೆ ವಿಪರೀತ ಜಾಗಿಂಗ್ ಮಾಡುವುದರಿಂದ ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ದೇಹ ದುರ್ಬಲವಾಗಿರುವಾಗ ಜಾಗಿಂಗ್ ಮಾಡುವುದರಿಂದ ಗಾಯಗೊಳ್ಳುವ ಅಪಾಯ ಹೆಚ್ಚು. ಹೀಗಾಗಿ ಇಂತಹ ಸಂದರ್ಭದಲ್ಲಿ ಜಾಗಿಂಗ್ ಮಾಡುವ ಸರಿಯಾದ ಕ್ರಮವನ್ನು ತಜ್ಞರಿಂದ ತಿಳಿದುಕೊಂಡು ಅದೇ ಪದ್ಧತಿಯನ್ನು ಮುಂದುವರಿಸುವುದು ಸೂಕ್ತ.