ಬೆಂಗಳೂರು: ಕೌಟುಂಬಿಕ ಯೋಜನೆಗಾಗಿ ಮಹಿಳೆಯರು ಬಳಸುವ ಗರ್ಭನಿರೋಧಕ ಗುಳಿಗೆಗಳಿಂದ ದಪ್ಪಗಾಗುತ್ತೇವೆ ಎಂಬ ಅತಂಕ ಅನೇಕರಿಗಿರುತ್ತದೆ. ಆದರೆ ಇದು ನಿಜವೇ? ತಜ್ಞರು ಏನು ಹೇಳುತ್ತಾರೆ.
ಗರ್ಭನಿರೋಧಕ ಗುಳಿಗೆಗಳನ್ನು ಬಳಸಲು ಅನೇಕ ಕಾರಣಗಳಿರಬಹುದು. ಆದರೆ ಗರ್ಭನಿರೋಧಕ ಗುಳಿಗೆಗಳು ಮಹಿಳೆಯರಲ್ಲಿ ಈಸ್ಟ್ರೋಜನ್ ಮತ್ತು ಪ್ರೊಸ್ಟ್ರೋಜನ್ ಹಾರ್ಮೋನ್ ನಿಯಂತ್ರಿಸುತ್ತವೆ. ಇದರಿಂದ ಕೆಲವರಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.
ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರ ದೇಹ ಹೊಂದಿಕೊಂಡು ತೂಕ ಹೆಚ್ಚಳವಾಗುವ ಸಾಧ‍್ಯತೆಯಿರುತ್ತದೆ. ಕೆಲವರಿಗೆ ಹಾರ್ಮೋನ್ ಬದಲಾವಣೆಯಿಂದ ಗರ್ಭನಿರೋಧಕ ಗುಳಿಗೆ ಬಿಟ್ಟ ಕೆಲವು ದಿನ ಅಥವಾ ತಿಂಗಳವರೆಗೆ ತೂಕ ಹೆಚ್ಚಳವಾಗಬಹುದು. ಮತ್ತೆ ಸಹಜ ಸ್ಥಿತಿಗೆ ಬರಬಹುದು.
ಗರ್ಭನಿರೋಧಕ ಗುಳಿಗೆ ಸೇವಿಸಿರುವುದರಿಂದ ಕೆಲವರಲ್ಲಿ ಹಾರ್ಮೋನ್ ಬದಲಾವಣೆಯಿಂದ ಹಸಿವು ಹೆಚ್ಚಾಗಬಹುದು. ಈ ಕಾರಣಕ್ಕೆ ಹೆಚ್ಚು ಆಹಾರ ಸೇವನೆ ಮಾಡಬಹುದು. ಇದರಿಂದಾಗಿ ಕೆಲವರಲ್ಲಿ ತೂಕ ಹೆಚ್ಚಳವಾಗವು ಸಾಧ‍್ಯತೆಗಳೂ ಇದೆ. ಆದರೆ ಎಲ್ಲರಲ್ಲೂ ಒಂದೇ ರೀತಿಯ ಬದಲಾವಣೆಯಾಗಬೇಕೆಂದೇನಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅವರ ದೇಹ ಗುಣಕ್ಕೆ ಅನುಸಾರವಾಗಿ ವ್ಯತ್ಯಸ್ಥವಾಗಿರುತ್ತದೆ.