Select Your Language

Notifications

webdunia
webdunia
webdunia
webdunia

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

Eid Milad

Krishnaveni K

ಬೆಂಗಳೂರು , ಶುಕ್ರವಾರ, 5 ಸೆಪ್ಟಂಬರ್ 2025 (09:08 IST)
Photo Credit: X

ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಈದ್ ಎ ಮಿಲಾದ್ ಕೂಡಾ ಒಂದು. ಈ ಹಬ್ಬವನ್ನು ಯಾಕೆ ಆಚರಿಸುತ್ತಾರೆ, ಇದರ ಮಹತ್ವವೇನು ಗೊತ್ತಾ?

ಈದ್ ಮಿಲಾದ್ ಎನ್ನುವುದು ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸುವ ಪವಿತ್ರ ಹಬ್ಬವಾಗಿದೆ. ಇದನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಮೂರನೇ ತಿಂಗಳ ರಬಿ ಉಲ್ ಅವ್ವಲ್ ನ 12 ನೇ ದಿನದಂದು ಆಚರಿಸುತ್ತಾರೆ. ಅದರಂತೆ ಇಂದು ಈದ್ ಹಬ್ಬವಾಗಿದೆ.

ಇದು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವೆಂದು ನಂಬಲಾಗಿದೆ. ಈ ಕಾರಣಕ್ಕೆ ಇದು ಮುಸ್ಲಿಮರಿಗೆ ಪವಿತ್ರವಾದ ದಿನವಾಗಿದೆ. ಹೀಗಾಗಿ ಈ ದಿನವನ್ನು ಪ್ರವಾದಿ ಮೊಹಮ್ಮದರ ಸಂದೇಶಗಳನ್ನು ನೆನಪಿಸಿಕೊಳ್ಳುವ ಮತ್ತು ಪ್ರಾರ್ಥಿಸುವ ದಿನವಾಗಿದೆ.

ಈ ದಿನ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಮೊಹಮ್ಮದರ ಸಂದೇಶಗಳನ್ನು ಸ್ಮರಿಸಿಕೊಂಡು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರವಾದಿ ಮೊಹಮ್ಮದರ ಜನ್ಮದಿನದ ಸವಿನೆನಪಿಗಾಗಿ ಬಡವರಿಗೆ ದಾನ ಮಾಡುವುದು, ಸಹಾಯ ಮಾಡುವುದು ಇತ್ಯಾದಿ ಕೆಲಸಗಳಲ್ಲಿ ಮುಸ್ಲಿಂ ಬಾಂಧವರು ತೊಡಗಿಸಿಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ಶಾಂತಿ ಸಂದೇಶವನ್ನು ಸಾರುವ ಹಬ್ಬವೆಂದೇ ಹೇಳಬಹುದು. ಹೀಗಾಗಿ ಮಸೀದಿ, ದರ್ಗಾಗಳಲ್ಲಿ ಪವಿತ್ರ ಕುರಾನ್ ಪಠಣ, ಮೊಹಮ್ಮದರ ಹಿತವಚನಗಳನ್ನು ಹೇಳುವ ಮೂಲಕ ಭಕ್ತಿ ಭಾವದಿಂದ ಪ್ರಪಂಚದಾದ್ಯಂತ ಇಂದು ಈದ್ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳ ಗೌರಿ ವ್ರತ ಮಾಡುವುದು ಹೇಗೆ