ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಮುಸಲ್ಮಾನ ಬಾಂಧವರ ಪ್ರಮುಖ ಹಬ್ಬ ಈದ್ ಮಿಲಾದ್ ಸಂದರ್ಭದಲ್ಲಿ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ನೆಟ್ಟಿಗರು ಟೀಕಿಸಿದ್ದು, ಕುಂಭಮೇಳ, ರಾಮಮಂದಿರಕ್ಕೆ ಯಾವತ್ತೂ ಭೇಟಿ ಕೊಟ್ಟಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಹುಲ್ ಗಾಂಧಿ ಮುಸಲ್ಮಾನ ಬಾಂಧವರೊಂದಿಗೆ ನಿನ್ನೆ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಭಕ್ಷ್ಯ ಸವಿದಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಕೆಲವು ವರ್ಗದವರಿಂದ ನಾನಾ ರೀತಿಯ ಕಾಮೆಂಟ್ ಬಂದಿದೆ.
ಇದೇ ರಾಹುಲ್ ಗಾಂಧಿ ಈ ಹಿಂದೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನವಿತ್ತರೂ ಬರಲಿಲ್ಲ. 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಒಂದು ವಿಶ್ ಕೂಡಾ ಮಾಡಿಲ್ಲ. ಆದರೆ ಈಗ ಇಫ್ತಾರ್ ಕೂಟಕ್ಕೆ ಹಾಜರಾಗಿದ್ದಾರೆ. ಇದು ಸಮಾಜವಾದವೋ, ಕೋಮುವಾದವೋ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್ಗರಿ ಈ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದರು. ರಾಹುಲ್ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನು ಸಮರ್ಥಿಸಿರುವ ಕಾಂಗ್ರೆಸ್ ಬೆಂಬಲಿಗರು, ಬಿಜೆಪಿಯವರು ಎಷ್ಟೇ ಉರಿದುಕೊಂಡರೂ ಈ ವ್ಯಕ್ತಿ ಮಾತ್ರ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದಿದ್ದಾರೆ.