Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯ ವೈಟ್ ಟಿ ಶರ್ಟ್ ಅಭಿಯಾನವನ್ನು ಈ ಐದು ಕಾರಣಕ್ಕೆ ನೀವು ಫಾಲೋ ಮಾಡಬೇಕಂತೆ

Rahul Gandhi

Krishnaveni K

ನವದೆಹಲಿ , ಸೋಮವಾರ, 20 ಜನವರಿ 2025 (14:04 IST)
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ವೈಟ್ ಟಿ ಶರ್ಟ್ ಅಭಿಯಾನವೊಂದನ್ನು ಆರಂಭಿಸಿದ್ದು ಇದಕ್ಕೆ ಐದು ಕಾರಣಗಳನ್ನೂ ನೀಡಿದ್ದಾರೆ.

ರಾಹುಲ್ ಗಾಂಧಿ ಇತ್ತೀಚೆಗಿನ ವರ್ಷಗಳಲ್ಲಿ ಸದಾ ಬಿಳಿ ಟಿ ಶರ್ಟ್ ಧರಿಸಿಕೊಂಡೇ ಇರುತ್ತಾರೆ. ಇದಕ್ಕೆ ಕಾರಣವನ್ನೂ ಈ ಮೊದಲೇ ಅವರು ಮತ್ತು ಅವರ ಆಪ್ತರು ಹೇಳಿಕೊಂಡೇ ಬಂದಿದ್ದಾರೆ. ಈಗ ವೈಟ್ ಟಿ ಶರ್ಟ್ ಅಭಿಯಾನವನ್ನು ಆರಂಭಿಸಿದ್ದು ಇದರಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ. ಪಾರದರ್ಶಕತೆ, ಸ್ಥಿರತೆ ಮತ್ತು ಸರಳತೆಯನ್ನು ಪ್ರತಿಪಾದಿಸುವುದಕ್ಕಾಗಿ ಬಿಳಿ ಶರ್ಟ್ ಧರಿಸುವುದಾಗಿ ಹೇಳಿದ್ದರು.

ಇದೀಗ ದೇಶದಲ್ಲಿ ಅಸಮಾನತೆ ನಿರಂತರವಾಗಿ ಹೆಚ್ಚುತ್ತಿದೆ. ಮೋದಿ ಸರ್ಕಾರ ಕೆಲವು ಬಂಡವಾಳಶಾಹಿಗಳನ್ನು ಮಾತ್ರ ಶ್ರೀಮಂತಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಇದರ ವಿರುದ್ಧ ಹೋರಾಡಬೇಕಿದೆ ಎಂದು ಅವರು ಕರೆ ಕೊಟ್ಟಿದ್ದಾರೆ.

ಐದು ಕಾರಣಗಳು
ನೀವು ಆರ್ಥಿಕ ಅಸಮಾನತೆ ವಿರುದ್ಧ ಹೋರಾಟ, ಆರ್ಥಿಕ ನ್ಯಾಯ, ಸಾಮಾಜಿಕ ಸಮಾನತೆ, ತಾರತಮ್ಯ ತಿರಸ್ಕರಿಸುವುದು ಮತ್ತು ಶಾಂತಿ ಮತ್ತು ಸ್ಥಿರತೆ ಎಂಬ ಐದು ಕಾರಣಗಳನ್ನಿಟ್ಟುಕೊಂಡು ಈ ಅಭಿಯಾನ ಆರಂಭಿಸುತ್ತಿರುವುದಾಗಿ ರಾಹುಲ್ ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಶಾಂತಿ, ಸಾಮಾಜಿಕ ಅಭದ್ರತೆ, ಆರ್ಥಿಕ ಅಸಮಾನತೆ ವಿರುದ್ಧ ಹೋರಾಡಬೇಕಾದರೆ ವೈಟ್ ಟಿ ಶರ್ಟ್ ಧರಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಅವರು ಕರೆ ನೀಡಿದ್ದಾರೆ. ಭಾರತದಲ್ಲಿ ವಿಭಜನೆಯನ್ನು ನಿವಾರಿಸಿ ಒಗ್ಗಟ್ಟು ಮತ್ತುಸಾಮಾಜಿಕ ಸಮಾನತೆ ತರುವುದು ಈ ನಮ್ಮ ಹೋರಾಟದ ಉದ್ದೇಶ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿ ಇಲ್ಲವೇ, ಹಾಗಿದ್ದರೆ ಇಂದೇ ಮಾಡಿಸಿ: ಆರ್ ಬಿಐ ಹೊಸ ರೂಲ್ಸ್