Select Your Language

Notifications

webdunia
webdunia
webdunia
webdunia

ಕೋಲ್ಕತ್ತಾ ವೈದ್ಯೆ ರೇಪ್ ಕೇಸ್ ಅಪರಾಧಿ ಸಂಜಯ್ ರಾಯ್ ಗೆ ಎಂಥಾ ಶಿಕ್ಷೆಯಾಗಬೇಕು, ಇಂದು ಪ್ರಕಟ

Kolkata Doctor rape case

Krishnaveni K

ಕೋಲ್ಕತ್ತಾ , ಸೋಮವಾರ, 20 ಜನವರಿ 2025 (09:28 IST)
ಕೋಲ್ಕತ್ತಾ: ಕಳೆದ ವರ್ಷ ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ರೇಪ್ ಆಂಡ್ ಮರ್ಡರ್ ಕೇಸ್ ವಿಚಾರಣೆ ಮುಗಿಸಿದ ಕೋರ್ಟ್ ಇಂದು ಅಪರಾಧಿಯಾಗಿರುವ ಸಂಜಯ್ ರಾಯ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಕಳೆದ ವರ್ಷ ಆಗಸ್ಟ್ 9 ರಂದು ಆರ್ ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯನ್ನು ರೇಪ್ ಮಾಡಿ ಕೊಲೆ ಮಾಡಲಾಗಿತ್ತು. ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾಯ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತನ ವಿರುದ್ಧ ಸಾಕ್ಷ್ಯಗಳು ಸಿಕ್ಕ ಹಿನ್ನಲೆಯಲ್ಲಿ ಸಿಬಿಐ ಕೋರ್ಟ್ ಗೆ ಆತನೇ ಆರೋಪಿ ಎಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.

ಇದೀಗ ಹಲವು ಸುತ್ತಿನ ವಿಚಾರಣೆ ನಡಸಿದ ಕೆಳಹಂತದ ಕೋರ್ಟ್ ಸಂಜಯ್ ರಾಯ್ ಆರೋಪಿ ಎಂದು ಶನಿವಾರ ತೀರ್ಪು ನೀಡಿತ್ತು. ಆದರೆ ಮೊನ್ನೆ ಸಂಜಯ್ ರಾಯ್ ಶಿಕ್ಷೆಯ ಪ್ರಮಾಣ ಪ್ರಕಟಿಸಿರಲಿಲ್ಲ.

ಇಂದು ಕೋರ್ಟ್ ಸಂಜಯ್ ರಾಯ್ ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಆತನಿಗೆ 25 ವರ್ಷಗಳ ಜೈಲು ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯನ್ನು ವಿಧಿಸಿದರೂ ಅಚ್ಚರಿಯಿಲ್ಲ. ಆದರೆ ಪ್ರಕರಣದಲ್ಲಿ ನಾನು ನಿರಪರಾಧಿ ಎಂದೇ ಈಗಲೂ ಸಂಜಯ್ ರಾಯ್ ಹೇಳುತ್ತಿದ್ದು, ಆತನಿಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟಿಸುವ ಸಂದರ್ಭದಲ್ಲಿ ಮಾತನಾಡಲು ಅವಕಾಶ ನೀಡುವುದಾಗಿ ಕೋರ್ಟ್ ಹೇಳಿತ್ತು. ಹೀಗಾಗಿ ಇಂದು ಕೋರ್ಟ್ ತೀರ್ಪಿನ ಮೇಲೆ ಎಲ್ಲರ ಗಮನವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Mahakumbh Mela 2025: ಬೆಂಕಿ ಅವಘಡ, ಹೊತ್ತಿ ಉರಿದ ಟೆಂಟ್‌ಗಳು