ಕೋಲ್ಕತ್ತಾ: ಟ್ರೈನೀ ವೈದ್ಯೆ ರೇಪ್ ಆಂಡ್ ಮರ್ಡರ್ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಕೆಳಹಂತದ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಆರೋಪಿ ಸಂಜಯ್ ರಾಯ್ ನೇ ನಿಜವಾದ ಅಪರಾಧಿಯೇ ಎಂದು ತಿಳಿಯಲಿದೆ.
ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದರ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಕೋರ್ಟ್ ಸಂಜಯ್ ರಾಯ್ ನಿಜವಾದ ಅಪರಾಧಿಯೇ ಎಂದು ತೀರ್ಪು ನೀಡಲಿದೆ. ಇಂದು ಕೋರ್ಟ್ ಅಪರಾಧಿ ಯಾರು ಎಂದು ಮಾತ್ರ ತೀರ್ಪು ನೀಡಲಿದೆ. ಶಿಕ್ಷೆಯ ಪ್ರಮಾಣ ಇಂದು ಪ್ರಕಟಿಸುವ ಸಾಧ್ಯತೆಯಿಲ್ಲ.
ಪ್ರಕರಣವೇನು?
ಆಗಸ್ಟ್ 9 ರಂದು ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಘಟನೆ ದೇಶದಾದ್ಯಂತ ಸದ್ದು ಮಾಡಿತ್ತು. ಸಿಸಿಟಿವಿ ದೃಶ್ಯಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಆಸ್ಪತ್ರೆಯಲ್ಲೇ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಬಿಐಗೆ ಪ್ರಕರಣದ ತನಿಖೆ ಒಪ್ಪಿಸಲಾಗಿತ್ತು.
ಪ್ರಕರಣ ನಡೆಸಿದ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ್ದು ಸಂಜಯ್ ರಾಯ್ ನೇ ಆರೋಪಿ ಎಂದು ಉಲ್ಲೇಖಿಸಿತ್ತು. ಇದೀಗ ಕೋರ್ಟ್ ಅಪರಾಧಿ ಸಂಜಯ್ ರಾಯ್ ನೇ ಹೌದೋ ಇಲ್ಲವೋ ಎಂದು ತೀರ್ಪು ನೀಡಲಿದೆ.