ಕೋಲ್ಕತ್ತಾ: ದೇಶದವನ್ನೇ ಬೆಚ್ಚಿಬೀಳಿಸಿದ ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆಗೆ ಒತ್ತಾಯಿಸಿ ಪಶ್ಚಿಮ ಬಂಗಾಳ ಕಿರಿಯ ವೈದ್ಯರ ಆಮರಣಾಂತ ಉಪವಾಸ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಸಂಜೆಯಿಂದ ಏಳು ಕಿರಿಯ ವೈದ್ಯಾಧಿಕಾರಿಗಳು ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಇದೀಗ ರಾಜ್ಯ ಸರ್ಕಾರದಿಂದ ಯಾವುದೇ ಸಂದೇಶ ಬಾರದಿರುವ ಕಾರಣ, ನಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ನಾವು ಇದನ್ನು ಧರಣಿ ಮುಂದುವರಿಸುತ್ತೇವೆ. ಯಾವುದೇ ಒತ್ತಡಕ್ಕೆ ಮಣಿದು ನಮ್ಮ ಪ್ರತಿಭಟನೆಯ ಹಾದಿಯಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆಯ ಮಹತೋ ಅವರು ಸ್ನಿಗ್ಧಾ ಹಜ್ರಾ, ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ತನಯ ಪಂಜಾ ಮತ್ತು ಅನುಸ್ತುಪ್ ಮುಖೋಪಾಧ್ಯಾಯ, ಎಸ್‌ಎಸ್‌ಕೆಎಂ ಆಸ್ಪತ್ರೆಯ ಅರ್ನಾಬ್ ಮುಖೋಪಾಧ್ಯಾಯ, ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜಿನ ಪುಲಸ್ತ ಆಚಾರ್ಯ ಮತ್ತು ಕೆಪಿಸಿ ವೈದ್ಯಕೀಯ ಕಾಲೇಜಿನ ಸಯಂತನಿ ಘೋಷ್ ಹಜ್ರಾ ಅವರು ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ.