Select Your Language

Notifications

webdunia
webdunia
webdunia
Friday, 4 April 2025
webdunia

7ವರ್ಷದ ಬಾಲಕಿ ಮೇಲೆ ರೇಪ್, ಹತ್ಯೆ: ವರ್ಷದೊಳಗೆ ಮಹತ್ವದ ತೀರ್ಪು ನೀಡಿದ ಕೋಲ್ಕತ್ತಾ ನ್ಯಾಯಾಲಯ

Minor Rape Murder Case

Sampriya

ಕೋಲ್ಕತ್ತ , ಗುರುವಾರ, 26 ಸೆಪ್ಟಂಬರ್ 2024 (19:31 IST)
ಕೋಲ್ಕತ್ತ: ಕಳೆದ ವರ್ಷ ಮಾರ್ಚ್‌ 26ರಂದು ಏಳು ವರ್ಷದ ಬಾಲಕಿ ಮೇಲೆ ರೇಪ್ ಮಾಡಿ ಹತ್ಯೆಗೈದ ಅಪರಾಧಿಗೆ ಕೋಲ್ಕತ್ತಾ ನ್ಯಾಯಲಯ ಮರಣದಂಡನೆ ವಿಧಿಸಿ ಮಹತ್ವದ ಆದೇಶ ನೀಡಿ, ಇದೊಂದು ತೀರಾ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣ ಹಿನ್ನೆಲೆ:  2023ರ ಮಾರ್ಚ್‌ 26ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ  ಬಳಿಕ ಫ್ಲಾಟ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದು ಖಚಿತವಾಗಿದೆ. ಪ್ರಕರಣದಲ್ಲಿ ಫ್ಲಾಟ್ ನಿವಾಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಕೃತ್ಯವನ್ನು ಆರೋಪಿ  ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟ ಅಲಿಪೋರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸುದೀಪ್ತೋ ಭಟ್ಟಾಚಾರ್ಯ ಅವರು, ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದರು.

7 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಭಾರೀ ದೊಡ್ಡ ಸಂಚಲನವನ್ನು ಮೂಡಿಸಿತ್ತು. ವರ್ಷದೊಳಗೆ ಪ್ರಕರಣದ ವಿಚಾರಣೆ ಯನ್ನು ಪೂರ್ಣಗೊಳಿಸಲಾಯಿತು ಎಂದು ಸರ್ಕಾರಿ ವಕೀಲರಾದ ಮಾಧವಿ ಘೋಷ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ: ಮಧ್ಯಾಹ್ನದ ಬಿಸಿಯೂಟ ಸೇವಿಸಿದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ