Publish Date: Sat, 21 Sep 2024 (19:19 IST)
Updated Date: Sat, 21 Sep 2024 (19:22 IST)
ವಿಜಯಪುರ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ಮುನಿರತ್ನ ವಿರುದ್ಧ ಇದೀಗ ಏಡ್ಸ್ ಟ್ರ್ಯಾಪ್ ವಿಚಾರ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ಈ ಸಂಬಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಕ್ರಿಯಿಸಿ, ಮುನಿರತ್ನ ವಿರುದ್ಧ ಆಘಾತಕಾರಿಯಾದ ಆರೋಪಗಳು ಕೇಳಿ ಬಂದಿದ್ದು, ಸೂಕ್ತ ತನಿಖೆಯಾಗಬೇಕು. ನಾವು ಯಾವುದೇ ಜನಾಂಗಕ್ಕೆ ಬಯ್ಯೋದು ಅಲ್ಲ, ಒಕ್ಕಲಿಗರ ವಿರುದ್ಧ ದಲಿತರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕೊಲೆ ಬೆದರಿಕೆ, ಜಾತಿನಿಂದನೆ ಮಾಡಿದ ವಿಚಾರದಲ್ಲಿ ಆಡಿಯೋ ಸತ್ಯಾಸತ್ಯತೇ ಹೊರಬರಬೇಕು. ಮಾತನಾಡಿರುವ ಧ್ವನಿ ಮುನಿರತ್ನ ಅವರದ್ದೇ ಹೌದಾ ಅಥವಾ ಇಲ್ಲ ಎಂಬುದು ಪರೀಕ್ಷೆಯಿಂದ ತಿಳಿಯಬೇಕು ಎಂದರು.
ಹನಿಟ್ರ್ಯಾಪ್ ಗಾಗಿ ಎಚ್ ಐ ವಿ ಪೀಡಿತ ಮಹಿಳೆಯರ ಬಳಕೆ ಮಾಡಿಕೊಂಡಿರುವ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ಬಹಳ ಅಕ್ಷಮ್ಯ ಅಪರಾಧ. ಇದಕ್ಕೆ ನಮ್ಮ ಸಿಂಪತಿ ಹಾಗೂ ಬೆಂಬಲ ಇಲ್ಲ. ಇದೆಲ್ಲ ತಪ್ಪೇ, ಆದರೆ ಇದೆಲ್ಲಾ ಪ್ರೂಫ್ ಆಗಬೇಕೆಂದರು.