Select Your Language

Notifications

webdunia
webdunia
webdunia
webdunia

ದರ್ಶನ್ ಬೆನ್ನಲ್ಲೇ ಮುನಿರತ್ನ ಅರೆಸ್ಟ್‌: ಆರ್‌ಆರ್‌ ನಗರದ ಬಗ್ಗೆ ಆರ್ಯವರ್ಧನ್ ಹೇಳಿದ ಭವಿಷ್ಯ ನಿಜವಾಯ್ತ

Actor Darshan Thoogudeep

Sampriya

ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2024 (16:00 IST)
Photo Courtesy X
ಬೆಂಗಳೂರು: ನಟ ದರ್ಶನ್ ಬೆನ್ನಲ್ಲೇ ಶಾಸಕ ಮುನಿರತ್ನ ಜೈಲು ಪಾಲಾಗುತ್ತಿದ್ದ ಹಾಗೇ ಖ್ಯಾತ ಜ್ಯೋತಿಷಿಯೊಬ್ಬರು ಆರ್‌ಆರ್‌ ನಗರದ ಬಗ್ಗೆ ಈ ಹಿಂದೆ ನುಡಿದ ಭವಿಷ್ಯ ವೈರಲ್ ಆಗುತ್ತಿದೆ.

ತನ್ನ ಆಪ್ತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸದ ಎಂಬ ಕಾರಣಕ್ಕೆ ದರ್ಶನ್ ಗ್ಯಾಂಗ್‌ ಆತನನ್ನು ಕೊಲೆ ಮಾಡಿದ್ದರು. ಇದೀಗ ಮುನಿರತ್ನ ಕೂಡಾ ಮಹಿಳೆ ವಿಚಾರವಾಗಿ ಪೊಲೀಸರು ಬಂಧಿಸಿದ್ದಾರೆ.  ಇದರ ಮಧ್ಯೆ ರಾಜರಾಜೇಶ್ವರಿ ನಗರದ ವಾಸ್ತು ಬಗ್ಗೆ ಈ ಹಿಂದೆ ಖ್ಯಾತ ಜ್ಯೋತಿಷಿ ಬಿಗ್‌ಬಾಸ್‌ ಸ್ಪರ್ಧಿ ಆರ್ಯವರ್ಧನ್ ನುಡಿದ ಭವಿಷ್ಯ ಚರ್ಚೆಗೆ ಕಾರಣವಾಗಿದೆ.

ನಟ ದರ್ಶನ್ ಹಾಗೂ ಶಾಸಕ ಮುನಿರತ್ನ ಅವರು ರಾಜರಾಜೇಶ್ವರಿ ನಗರದಲ್ಲಿ ವಾಸ ಮಾಡುತ್ತಿರುವುದು. ಈ ಇಬ್ಬರು ಸ್ತ್ರೀ ಸಹವಾಸದಿಂದಲೇ ಇಂದು ಜೈಲು ಪಾಲಾಗಿದ್ದಾರೆ. ಆರ್ಯವರ್ಧನ್ ಗುರೂಜಿ ಅವರು ಈ ಹಿಂದೆ ಆರ್‌ ಆರ್‌ ನಗರದಲ್ಲಿ ವಾಸ್ತು ದೋಷವಿದೆ. ಇಲ್ಲಿ ವಾಸ ಮಾಡುವವರಿಗೆ ಎಲ್ಲವೂ ಇರುತ್ತದೆ, ಆದರೆ ನೆಮ್ಮದಿ ಇರಲ್ಲ ಎಂದಿದ್ದರು.

ದರ್ಶನ್ ಸಂಬಂಧ ಭವಿಷ್ಯ ನುಡಿದ ಆರ್ಯವರ್ಧನ್ ಅವರು ನಟ ದರ್ಶನ್ ಹೆಸರಿಗೆ ನಂಬರ್ 21 ಬರುತ್ತದೆ. ಈ ಸಂಖ್ಯೆ ಅವರನ್ನು ಹೆಚ್ಚು ಡಿಸ್ಟರ್ಬ್ ಮಾಡಲಿದೆ. ಏಕೆಂದರೆ ಈ ಸಂಖ್ಯೆ ಆತನ ಹುಟ್ಟಿನ ದಿನಾಂಕಕ್ಕೆ ವಿರುದ್ಧವಾಗಿದೆ. ದರ್ಶನ್ ಜಾತಕದಲ್ಲಿ ಶನಿ ಇರುವ ಕಾರಣ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಈ ವರ್ಷದಲ್ಲಿ ದರ್ಶನ್‌ಗೆ  ಸಣ್ಣ ದುಃಖ, ಸೋಲು ಅನುಭವಿಸುತ್ತಾರೆ ಎಂದಿದ್ದರು.  

ಇದೀಗ ಆರ್‌ ಆರ್‌ ನಗರದಲ್ಲಿ ವಾಸವಿರುವ ಮುನಿರತ್ನ ಅವರು ಕೂಡಾ ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೇ ಜೈಲು ಸೇರಿದ್ದಾರೆ.
ಇದೆಲ್ಲ ನೋಡಿದರೆ ಆರ್ಯವರ್ಧನ್ ಗುರೂಜಿ ಆರ್‌ ಆರ್‌ ನಗರದ ಬಗ್ಗೆ ನುಡಿದ ಭವಿಷ್ಯ ನಿಜವಾದ ಹಾಗೇ ಕಾಣಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ್ಮೇಲೆ ಯಾಕೆ ದಪ್ಪ ಆಗಿದ್ದೀರಿ ಮೇಡಂ ಎಂದಿದ್ದಕ್ಕೆ ಸೋನಲ್ ಮೊಂಥೆರೋ ಹೇಳಿದ್ದೇನು ನೋಡಿ