Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಫೋಟೋ ನಕಲಿ: ದರ್ಶನ್ ಕೇಸ್ ಗೆ ಸಿಗುತ್ತಾ ಟ್ವಿಸ್ಟ್

Renukaswamy Case

Sampriya

, ಬುಧವಾರ, 18 ಸೆಪ್ಟಂಬರ್ 2024 (16:36 IST)
Photo Courtesy X
ಬೆಂಗಳೂರು: ನಟ ದರ್ಶನ್ ಗ್ಯಾಂಗ್‌ನಿಂದ ಚಿತ್ರಹಿಂಸೆಗೆ ಒಳಗಾಗಿದ್ದ ರೇಣುಕಾಸ್ವಾಮಿ ಪ್ರಾಣಭಿಕ್ಷೆ ಬೇಡುತ್ತಿರುವ ಫೋಟೋ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಸಂಚಲನವನ್ನು ಮೂಡಿಸಿತ್ತು. ಈ ಸಂಬಂದ ಆರೋಪಿಗಳು ಇದು ಎಐ ಫೋಟೋ ಎಂದು ಹೇಳುತ್ತಿದ್ದಾರೆ.

 ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊನೆ ಕ್ಷಣಗಳ ಫೋಟೊಗಳು ಬಗ್ಗೆ ಆರೋಪಿಗಳು ಇದು ಎಐ ಫೋಟೋ ಎಂದು ಹೇಳಿದ್ದಾರೆ.

ಇದೀಗ ಪ್ರಕರಣ ಸಂಬಂಧ ಪೊಲೀಸರು ಆರೋಪಿ ವಿನಯ್ ಮೊಬೈಲ್‌ ಅನ್ನು ಮತ್ತೇ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಅದರ ವರದಿ ಬಂದ್ಮೇಲೆ ನಿಜಾಂಶ ಹೊರಬೀಳಲಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು 200ಕ್ಕೂ ಅಧಿಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧದ 3991ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಜಾರ್ಚ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಪ್ರಾಣ ಭಿಕ್ಷೆಯನ್ನು ಬೇಡುತ್ತಿರುವುದು ಹಾಗೂ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಿರುವ ಪೋಟೋವಿದೆ.

ಈ ಫೋಟೋ ವೈರಲ್ ಆಗಿತ್ತು. ವಿನಯ್ ಮೊಬೈಲ್ ಎಕ್ಸ್ಟ್ರಾಕ್ಟ್ ವೇಳೆ ರೇಣುಕಾಸ್ವಾಮಿಯ ರಕ್ತಸಿಕ್ತ ಫೋಟೊಗಳು ಪತ್ತೆಯಾಗಿದ್ದವು. ಇದೀಗ ಸಿಕ್ಕಿರುವ ಫೋಟೊಗಳನ್ನ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲು ಪೊಲೀಸರು ನಿರ್ಧಾರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ವಿಘ್ನೇಶ್ ಮೇಲಿನ ಪ್ರೀತಿಯನ್ನು ನಯನತಾರಾ ವರ್ಣಿಸಿದ್ದು ಹೀಗೆ