Select Your Language

Notifications

webdunia
webdunia
webdunia
webdunia

ಪತಿ ವಿಘ್ನೇಶ್ ಮೇಲಿನ ಪ್ರೀತಿಯನ್ನು ನಯನತಾರಾ ವರ್ಣಿಸಿದ್ದು ಹೀಗೆ

ಪತಿ ವಿಘ್ನೇಶ್ ಮೇಲಿನ ಪ್ರೀತಿಯನ್ನು ನಯನತಾರಾ ವರ್ಣಿಸಿದ್ದು ಹೀಗೆ

Sampriya

ತಮಿಳುನಾಡು , ಬುಧವಾರ, 18 ಸೆಪ್ಟಂಬರ್ 2024 (16:10 IST)
Photo Courtesy X
ಬಹುಭಾಷಾ ತಾರೆ ನಯನತಾರಾ ಅವರು ಈಚೆಗೆ ಪತಿ ವಿಘ್ನೇಶ್ ಶಿವನ್ ಜತೆ ಸೈಮಾ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಸಿನಿಮಾ ಬ್ಯುಸಿಯ ಮಧ್ಯೆಯೂ ನಯನತಾರಾ ಅವರು ತಮ್ಮ ಪತಿ ಬರ್ತಡೇ ರೋಮ್ಯಾಂಟಿಗ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶುಭಹಾರೈಸಿದ್ದಾರೆ.

ಫೋಟೋದಲ್ಲಿ ನಯನತಾರಾ ಅವರು ಪತಿಯ ಹಣೆಯ ಮೇಲೆ ಮುತ್ತಿಟ್ಟಿದ್ದಾರೆ. ಜನ್ಮದ ದಿನದ ಶುಭಾಶಯಗಳು. ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಪತಿಗೆ ನಯನತಾರಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

ಈ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ನೀವಿಬ್ಬರು ತುಂಬಾ ಅದೃಷ್ಟವಂತರೂ ಎಂದು ಬರೆದುಕೊಂಡಿದ್ದಾರೆ.  
ನಯನತಾರಾ ಅವರು ತಮ್ಮ ನೈಜ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರು ಈಚೆಗೆ ಶಾರುಖ್‌ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಬೇಡಿಕೆ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸತ್ತು ಸಮಾಧಿಯಾದರೂ ಸಾಹಸಸಿಂಹ ವಿಷ್ಣುವರ್ಧನ್ ಗೆ ನೋವು ತಪ್ಪಲಿಲ್ಲ: ಅಭಿಮಾನ್ ಸ್ಟುಡಿಯೋದಲ್ಲಿ ಹೈಡ್ರಾಮಾ