Select Your Language

Notifications

webdunia
webdunia
webdunia
webdunia

ಉಪೇಂದ್ರ ಬರ್ತ್ ಡೇಗೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

UI Movie

Krishnaveni K

ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2024 (10:49 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರಗೆ ಇಂದು ಜನ್ಮದಿನದ ಸಂಭ್ರಮ. ನಟ ಉಪೇಂದ್ರ 55 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುತ್ತಿದೆ.

ನಟ ಉಪೇಂದ್ರ ಈಗ ಯುಐ ಸಿನಿಮಾ ಮತ್ತು 45 ಸಿನಿಮಾ ಮಾಡಿದ್ದಾರೆ. ಯುಐ ಅವರೇ ನಿರ್ದೇಶಿಸಿ ನಟಿಸಿರುವ ಸಿನಿಮಾ. ಈ ಸಿನಿಮಾ ಬಗ್ಗೆ ಅವರು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇನ್ನೊಂದೆಡೆ ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಜೊತೆಗೆ 45 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇಂದು ಉಪ್ಪಿ ಜನ್ಮದಿನ ಪ್ರಯುಕ್ತ 45 ಸಿನಿಮಾ ತಂಡ ವಿಶೇಷ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಪಾತ್ರ ವಿಶೇಷವಾಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ವಿಡಿಯೋ ನೋಡಿದರೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ.

ಇನ್ನು, ಈ ಬಾರಿ ಉಪೇಂದ್ರ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಮನೆ ಮುಂದೆ ಶಾಮಿಯಾನ ಹಾಕಿ ಕೇಕ್ ಕಟ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಕ್ರಿಯೇಟಿವ್ ನಿರ್ದೇಶಕ, ನಟನ ಹುಟ್ಟುಹಬ್ಬ ಆಚರಿಸಲು ಸಾಕಷ್ಟು ಜನ ಸೇರಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಬರ್ತ್ ಡೇ: ವಿಷ್ಣುದಾದ ಸ್ನೇಹ ಲೋಕ ಆರಂಭಿಸಿದ್ದು ಯಾಕೆ