Publish Date: Tue, 05 Mar 2024 (15:51 IST)
Updated Date: Tue, 05 Mar 2024 (15:54 IST)
ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತಿಗೆ ರಿಯಲ್ ಸ್ಟಾರ್ ಉಪೇಂದ್ರ ಖುಷಿ ವ್ಯಕ್ತಪಡಿಸಿದ್ದಾರೆ.
ಆಂಕರ್ ಅನುಶ್ರೀ ಉಗ್ರಂ ಸಿನಿಮಾ ರಿಲೀಸ್ ಆಗಿ 10 ವರ್ಷ ಕಳೆದ ಹಿನ್ನಲೆಯಲ್ಲಿ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ವಿಶೇಷ ಸಂದರ್ಶನ ನಡೆಸಿದ್ದರು. ಈ ವೇಳೆ ಆಂಕರ್ ಅನುಶ್ರೀ ನಿಮ್ಮ ಮೆಚ್ಚಿನ ನಿರ್ದೇಶಕ ಯಾರು ಎಂದು ಕೇಳಿದ್ದಾರೆ. ಇದಕ್ಕೆ ಪ್ರಶಾಂತ್ ನೀಲ್ ಯಾವತ್ತೂ ಇಷ್ಟಪಡುವವರು ಉಪೇಂದ್ರ ಎಂದಿದ್ದಾರೆ.
ನನ್ನ ಆಲ್ ಟೈಮ್ ಫೇವರಿಟ್ ನಿರ್ದೇಶಕ ಉಪೇಂದ್ರ. ಅವರು ಅಂದು ಮಾಡಿದಂತಹ ಶ್, ತರ್ಲೆನನ್ಮಗ ಮುಂತಾದ ಸಿನಿಮಾಗಳನ್ನು ಬೇರೆ ಯಾರೂ ಮಾಡಲೂ ಸಾಧ‍್ಯವಿಲ್ಲ. ಕನ್ನಡ ಕಾರ್ಯಕ್ರಮದಲ್ಲಿ ಹೇಳ್ತಿದ್ದೀನಿ ಅಂದುಕೊಳ್ಳಬೇಡಿ. ವಿಶ್ವದಲ್ಲಿ ಯಾರೂ ಶ್, ತರ್ಲೆ ನನ್ಮಗನಂತಹ ಸಿನಿಮಾ ಮಾಡಲು ಸಾಧ‍್ಯವಿಲ್ಲ. ಎ ಚಿತ್ರವಂತೂ ಯಾರೂ ಮಾಡಕ್ಕಾಗಲ್ಲ ಎಂದು ಹೊಗಳಿದ್ದರು.
ಈ ಬಗ್ಗೆ ಇದೀಗ ಉಪೇಂದ್ರ ಸಂದರ್ಶನವೊಂದರಲ್ಲಿ ಕೇಳಿದಾಗಿ ಪ್ರತಿಕ್ರಿಯಿಸಿರುವ ಅವರು ಪ್ರಶಾಂತ್ ನೀಲ್ ನಿಜಕ್ಕೂ ಗ್ರೇಟ್. ಇಡೀ ದೇಶಕ್ಕೆ ಅವರು ಗೊತ್ತು. ಅವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರೆ ಖುಷಿಯಾಗುತ್ತದೆ. ಅವರ ಮಾತುಗಳು ನನ್ನ ಟಚ್ ಮಾಡಿತು ಎಂದಿದ್ದಾರೆ.
ಇದೀಗ ರಿಯಲ್ ಸ್ಟಾರ್ ಉಪೇಂದ್ರ ಯುಐ ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಹಾಡೊಂದನ್ನು ಲಾಂಚ್ ಮಾಡಿದ್ದರು. ಈ ಟ್ರೋಲ್ ಹಾಡಿಗೆ ಜನರಿಂದ ಭಾರೀ ಪ್ರತಿಕ್ರಿಯೆ ಬಂದಿದೆ.