Select Your Language

Notifications

webdunia
webdunia
webdunia
webdunia

ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ಊರಗಲವಾಯ್ತ ದರ್ಶನ್ ಮುಖ

Darshan

Sampriya

ಬಳ್ಳಾರಿ , ಮಂಗಳವಾರ, 17 ಸೆಪ್ಟಂಬರ್ 2024 (16:48 IST)
Photo Courtesy X
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಅವರು ಇಂದು ಬಳ್ಳಾರಿಯಲ್ಲಿ ಭೇಟಿಯಾದರು.

ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 21ದಿನ ಕಳೆದಿದ್ದು, ಇದೀಗ ನಾಲ್ಕನೇ ಬಾರಿ ಬಳ್ಳಾರಿ ಜೈಲಿನಲ್ಲಿ ಪತಿಯನ್ನು ವಿಜಯಲಕ್ಷ್ಮೀ ಭೇಟಿಯಾಗಿ, ಧೈರ್ಯ ತುಂಬುತ್ತಿದ್ದಾರೆ.  ಇದುವರೆಗೆ ವಿಜಯಲಕ್ಷ್ಮೀ ಜತೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರು ಬರುತ್ತಿದ್ದರು. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ರಕ್ತ ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು.

ಆದರೆ ಮೊದಲ ಬಾರಿ ದರ್ಶನ್ ಸ್ನೇಹಿತ ನಟ ಧನ್ವೀರ್, ಆಪ್ತ ಹೇಮಂತ್ ಅವರು ವಿಜಯಲಕ್ಷ್ಮೀ ಜತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಅವರು ಪತ್ನಿ ಜತೆ ಮಾತನಾಡಲು ಸಂದರ್ಶಕರ ಕೊಠಡಿಗೆ ಆಗಮಿಸಿದ್ದಾರೆ.

ಇನ್ನೂ ಪತ್ನಿ ಹಾಗೂ ಸ್ನೇಹಿತನನ್ನು ನೋಡುತ್ತಿದ್ದ ಹಾಗೇ ದರ್ಶನ್ ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಅದಲ್ಲದೆ ದರ್ಶನ್ ಸ್ಥಿತಿ ನೋಡಿ ಧನ್ವೀರ್ ಕಣ್ಣೀರು ಹಾಕಿದ್ದಾರೆ. ಭೇಟಿ ವೇಳೆ ಪತ್ನಿ ವಿಜಯಲಕ್ಷ್ಮೀ ಜತೆ ಮುಂದಿನ ಕಾನೂನು ಹೋರಾಟದ ಬಗ್ಗೆ ದರ್ಶನ್ ಮಾತುಕತೆ ನಡೆಸಿದ್ದಾರೆ.

ಇನ್ನೂ ದರ್ಶನ್‌ಗಾಗಿ ವಿಜಯಲಕ್ಷ್ಮೀ ಅವರು ಡ್ರೈ ಫ್ರೂಟ್ಸ್‌, ಹಣ್ಣು, ಬಿಸ್ಕೆಟ್ ಹಾಗೂ ಬಟ್ಟೆಗಳನ್ನು ತಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೇಷ್ಠಾ ಹಿಂದೆ ಬಿದ್ದಿರುವ ತಾಂಡವ್‌ಗೆ ಅನುಬಂಧ ವೇದಿಕೆಯಲ್ಲೇ ಕ್ಲಾಸ್‌ ತೆಗೆದುಕೊಂಡು ಅಜ್ಜಿ