Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ: ದರ್ಶನ್‌ಗೆ ಟೀ ಪಾರ್ಟಿ ಆಯೋಜಿಸಿದ್ದ ನಾಗನಿಂದ ಮೊಬೈಲ್ ವಶ

Darshan On Jail

Sampriya

ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2024 (13:10 IST)
ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ಫೋಟೋ ವೈರಲ್ ಆಗಿ ಬಾರಿ ಚರ್ಚೆಗೆ ಕಾರಣವಾಗಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ದರ್ಶನ್‌ಗೆ ಟೀ ಪಾರ್ಟಿ ಆಯೋಜಿಸಿದ್ದ ಕೈದಿ ವಿಲ್ಸನ್ ಗಾರ್ಡನ್ ನಾಗನಿಂದ ಮೊಬೈಲ್ ಸೇರಿದಂತೆ ಹಲವರಿಂದ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಶನಿವಾರ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸಿದ್ದಾರೆ. ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಆತನ ಸಹಚರರಿಂದ ಸುಮಾರು 18 ಮೊಬೈಲ್‌ಫೋನ್‌ ಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಅಧಿಕಾರಿಗಳು ಮೊಬೈಲ್ ಜೊತೆಗೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ​ರಾಜಾತಿಥ್ಯ ನೀಡಿರುವ ಫೋಟೋ ವೈರಲ್​ ಆದ ನಂತರ ಜೈಲು ಅಧಿಕಾರಿಗಳು ಆರೋಪಿ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶೀಫ್ಟ್​ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಿಮಿಕ್‌ನಿಂದ ಜನ ಥಿಯೇಟರ್‌ಗೆ ಬರಲ್ಲ, ನ್ಯೂಸ್‌ ನೋಡಬಹುದಷ್ಟೇ: ಚುಚ್ಚುಮಾತಿಗೆ ಕಿರಣ್‌ ಬೇಸರ