Select Your Language

Notifications

webdunia
webdunia
webdunia
webdunia

ACP ಚಂದನ್ ಹಳೇ ರಹಸ್ಯ ಕೆದಕಿದ ಸ್ನೇಹಮಯಿ ಕೃಷ್ಣ: ಏನಿದು ಸೀಕ್ರೆಟ್

chandan kumar

Sampriya

ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2024 (19:02 IST)
Photo Courtesy X
ಬೆಂಗಳೂರು:  ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಿ ಹೀರೋ ಆಗಿದ್ದ ಎಸಿಪಿ ಚಂದನ್ ಕುಮಾರ್ ಮೇಲೆ ಸ್ನೇಹಮಹಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಎಸಿಪಿ ಚಂದನ್ ಕುಮಾರ್ ಅವರನ್ನು ಇದೀಗ ಹೀರೋ ರೀತಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಆದರೆ ಅವರ ಸ್ವಂತ ತಂಗಿಯಿಂದಾಗಿ ಒಬ್ಬ ಸಾವಿಗೆ ಶರಣಾಗಿದ್ದಾನೆ. ಆದರೆ ಈ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

ಈಕೆಯ ತಂಗಿಯ ಒತ್ತಡಕ್ಕೆ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸ್ಪಷ್ಟವಾದ ದಾಖಲಾತಿ ನನ್ನಲಿದೆ. ಇನ್ನೂ ಹೋರಾಟ ಮಾಡ್ತೀನಿ, ಬಿಡುವುದು ಇಲ್ಲ ಎಂದರು.

ಅದಲ್ಲದೆ ತಿಪಟೂರಿನ ಹಾಲಿನ ಸಂಸ್ಥೆಯ ನೂರಾರು ರೈತರಿಗೆ ಮೋಸ ಆಗಿದೆ, ಅದನ್ನ ತನಿಖೆ ಮಾಡಿ ಎಂದು ದೂರು ನೀಡಿದರೆ ನನ್ನ ಮೇಲೆ ಲಂಚದ ಆರೋಪ ಮಾಡಿದ್ರು ಎಂದು ಎಸಿಪಿ ಚಂದನ್ ಕುಮಾರ್ ಮೇಲೆ ಗಂಭೀರ ಆರೋಪ ಮಾಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಭೇಟಿಯಾದ ಗುತ್ತಿಗೆದಾರ ಚಲುವರಾಜು