Publish Date: Thu, 12 Sep 2024 (17:16 IST)
Updated Date: Thu, 12 Sep 2024 (17:46 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳಾದ್ರು ಮಾತ್ರ ದಾಸನ ದೌಲತ್ತು ಚೂರು ಕಡಿಮೆಯಾಗಿಲ್ಲ. ಹೌದು ಇಂದು ಸಂಜೆ ವಕೀಲರನ್ನು ಭೇಟಿಯಾಗಲು ಸಂದರ್ಶಕರ ಕೊಠಡಿಗೆ ಬರುತ್ತಿದ್ದ ಹಾಗೇ ದರ್ಶನ್ ಮಾಧ್ಯಮಗಳ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಸಂದರ್ಶಕರ ಕೊಠಡಿಗೆ ನಡೆದುಕೊಂಡು ಬರುತ್ತಿದ್ದ ಹಾಗೇ ದರ್ಶನ್ ಏಕಾಏಕಿ ತನ್ನ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ.
ವಕೀಲರ ಭೇಟಿ ವೇಳೆ ಕ್ಯಾಮಾರಾ ಕಂಡು ದರ್ಶನ್ ಈ ರೀತಿ ವರ್ತಿಸಿದ್ದಾರೆ. ಇದನ್ನು ನೋಡಿದವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ರು ದರ್ಶನ್ ಮಾತ್ರ ಬುದ್ಧಿ ಕಲಿಯಲಿಲ್ಲ.
ಇಂದು ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ್ ಭೇಟಿಯಾಗಿ ಮಾತುಕತೆ ನಡೆಸಿದರು.