Select Your Language

Notifications

webdunia
webdunia
webdunia
webdunia

ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಜತೆಗಿನ ಪವಿತ್ರಾ ಗೌಡ ಪರಿಚಯ, ಸ್ನೇಹ, ಪ್ರೀತಿ ಬಗ್ಗೆ ಇಂಚಿಂಚು ಮಾಹಿತಿ

Pavitra Gowda Love Relationship

Sampriya

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (18:50 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಕಳೆದ 10ವರ್ಷಗಳಿಂದ ಪವಿತ್ರಾ ಗೌಡ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನೊಂದಿಗೆ ಇರುವುದಾಗಿ ದರ್ಶನ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ.

ಇದೀಗ ಜಾರ್ಜ್‌ಶೀಟ್‌ನಲ್ಲಿ ದರ್ಶನ್‌ ಜತೆಗಿನ ಸಂಬಂಧದ ಬಗ್ಗೆ ಪವಿತ್ರಾ ಗೌಡ ಹೇಳಿಕೆಯನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಮೊದಲು ನನಗೆ ದರ್ಶನ್‌ಗೆ ಮದುವೆಯಾಗಿ ಮಗ ಇರುವ ಗೊತ್ತಿರಲಿಲ್ಲ, ನಂತರ ಈ ಬಗ್ಗೆ ತಿಳಿಯಿತು. ಸಿನಿಮಾದಲ್ಲಿ ಅವಕಾಶ ಪಡೆಯಲು ನಾನು ದರ್ಶನ್ ಅವರ ನಂಬರ್‌ ಅನ್ನು ಸ್ನೇಹಿತ ಕಡೆಯಿಂದ ಪಡೆದುಕೊಂಡೆ. ದರ್ಶನ್ ಅವರ ಮುಂದಿನ ಬುಲ್ ಬುಲ್‌ನಲ್ಲಿ ಅವಕಾಶ ಕೇಳಿದೆ. ಆದರೆ ಆಗಾಗಲೇ ಹೀರೋಯಿನ್ ಆಯ್ಕೆ ಆಗಿದೆ ಎಂದಿದ್ದರು. ನಂತರ ನಾನು ಅವರ ಬಳಿ ಸಿನಿಮಾ ಅವಕಾಶ ವಿಚಾರವಾಗಿ ಮೆಸೇಜ್ ಮಾಡುತ್ತಿದ್ದೆ. ಅದು ಸ್ನೇಹವಾಗಿ, ಆಗಾಗ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆವು. ನಂತರ ನಮ್ಮ ಮನೆಗೂ ಬಂದು ಹೋಗುತ್ತಿದ್ದರು ಎಂದು ಪವಿತ್ರಾ ದರ್ಶನ್ ಜತೆ ಶುರುವಾದ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ.

ಸ್ನೇಹ ಪ್ರೀತಿಗೆ ತಿರುಗಿತು. ನಂತರ ನಾವ್ ಲಾಂಗ್ ಡ್ರೈವ್ ಹೋಗಲು ಶುರು ಮಾಡಿದೆವು. ನಾನು, ನನ್ನ ಮಗಳು ಹಾಗೂ ದರ್ಶನ್‌ ಮೂವರು ವಾಸ ಮಾಡೋದಕ್ಕಾಗಿಯೇ ಆರ್.ಆರ್ ನಗರದಲ್ಲಿ ನನ್ನ ಹೆಸರಿಗೆ ಮನೆ ಖರೀದಿ ಮಾಡಿದ್ದರು. ಮನೆಯನ್ನು ಖರೀದಿಸಲು ನಿರ್ಮಾಪಕ ಸೌಂದರ್ಯ ಜಗದೀಶ್‌ ಮೂಲಕ 1.75 ಕೋಟಿ ರೂ. ಹಣವನ್ನು ಕನಕಪುರ ರಸ್ತೆಯಲ್ಲಿರುವ ನನ್ನ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಂದಿನಿಂದ ಅಲ್ಲೇ ನಾನು ವಾಸವಾಗಿದ್ದೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೊದಲ ನಿರ್ಮಾಣದ ಸಿನಿಮಾದ ಟೀಸರ್ ನೋಡಿ ಶಿವಣ್ಣ ಫುಲ್ ಫಿದಾ