Select Your Language

Notifications

webdunia
webdunia
webdunia
webdunia

ಗಿಮಿಕ್‌ನಿಂದ ಜನ ಥಿಯೇಟರ್‌ಗೆ ಬರಲ್ಲ, ನ್ಯೂಸ್‌ ನೋಡಬಹುದಷ್ಟೇ: ಚುಚ್ಚುಮಾತಿಗೆ ಕಿರಣ್‌ ಬೇಸರ

ಗಿಮಿಕ್‌ನಿಂದ ಜನ ಥಿಯೇಟರ್‌ಗೆ ಬರಲ್ಲ, ನ್ಯೂಸ್‌ ನೋಡಬಹುದಷ್ಟೇ: ಚುಚ್ಚುಮಾತಿಗೆ ಕಿರಣ್‌ ಬೇಸರ

Sampriya

ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2024 (11:02 IST)
ಬೆಂಗಳೂರು: ರಾನಿ ಸಿನಿಮಾ ಪ್ರಮೋಷನ್‌ಗೆ ಅಪಘಾತದ ಗಿಮಿಕ್‌ ಮಾಡಲಾಗಿದೆ ಎಂಬ ಚುಚ್ಚುಮಾತಿಗೆ ಪ್ರತಿಕ್ರಿಯಿಸಿದ ಚಿತ್ರದ ನಾಯಕ ನಟ ಕಿರಣ್‌ ರಾಜ್‌, ಇಂತಹ  ಗಿಮಿಕ್‌ನಿಂದ ಜನ ಥಿಯೆಟರ್‌ಗೆ ಬರಲ್ಲ. ನ್ಯೂಸ್‌ ನೋಡಬಹುದಷ್ಟೇ ಎಂದು ಹೇಳಿದ್ದಾರೆ.

ನಟ ಕಿರಣ್‌ ರಾಜ್‌ ನಾಯಕನಟಗಾಗಿ ಅಭಿನಯಿಸಿರು ರಾನಿ ಚಿತ್ರ ಸೆ.12ರಂದು ತೆರೆಕಂಡಿದೆ. ಬಿಡುಗಡೆಗೆ ಎರಡು ದಿನ ಮುನ್ನ ಅಂದರೆ ಸೆ.10ರಂದು ರಾತ್ರಿ ಕಾರು ಅಪಘಾತದಲ್ಲಿ ಗಾಯಗೊಂಡು ಕಿರಣ್‌ ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೇ, ಇದು ಸಿನಿಮಾ ಪ್ರಚಾರದ ಗಿಮಿಕ್‌ ಎಂಬ ಮಾತು ಕೇಳಿಬಂದಿತ್ತು.

ಅದಕ್ಕೆ ಬೇಸರ ವ್ಯಕ್ತಪಡಿಸಿರುವ ಕಿರಣ್‌ ರಾಜ್‌, ನನ್ನ ಬಾಯಿಯನ್ನು ನಾನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬೇರೆಯವರ ಬಾಯಿಯನ್ನು ನಾನು ತಡೆಯೋಕ್ಕಾಗುತ್ತಾ. ಎಲ್ಲರಿಗೂ ನೋಡೋ ನೋಟ ಎರಡು ಇರುತ್ತೆ. ನಮಗೆ ಯಾವುದು ಬೇಕೋ ಅದರ ಕಡೆ ಗಮನ ಕೊಡಬೇಕು ಎಂದು ಹೇಳಿದ್ದಾರೆ.

ಈ ತರ ಗಿಮಿಕ್‌ನಿಂದ 100 ಟಿಕೆಟ್‌ ಸೇಲ್‌ ಅಗುತ್ತೆ ಅಂದ್ರೆ ಒಂದರ್ಥಇದೆ. ಗಿಮಿಕ್‌ ಮಾಡೋದಾಗಿದ್ದರೆ ಬ್ಯಾಂಡೇಜ್‌ ಅನ್ನು ಎದೆ ಮೇಲೆ ಹಾಕಿಕೊಂಡು, ಕುಂಟುತ್ತಾ ಬರುತ್ತಿದ್ದೆ. ಎರಡು ವರ್ಷದ ಶ್ರಮವನ್ನು ತೆರೆಮೇಲೆ ನೋಡುವ ಸಮಯದಲ್ಲಿ ಗಿಮಿಕ್‌ ಮಾಡಿ ಆಸ್ಪತ್ರೆಯಲ್ಲಿ ಇಂಜೆಕ್ಷನ್‌, ಮಾತ್ರೆ ತಗೊಂಡು ಮಲಗುವ ಅಗತ್ಯ ನನಗೇನಿದೆ ಎಂದು ಪ್ರಶ್ನೆ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಹಾಡಿಗೆ ಹೆಜ್ಜೆ ಹಾಕಿದ ಪ್ರಥಮ್: ಇದು ಬಕೆಟ್ ಎಂದು ಕಾಲೆಳೆದ ಡಿ ಬಾಸ್ ಫ್ಯಾನ್ಸ್