Select Your Language

Notifications

webdunia
webdunia
webdunia
webdunia

ಏಡ್ಸ್‌ ಹಬ್ಬಿಸಲು ಮುನಿರತ್ನ ಯತ್ನಿಸಿದ್ದ:ಕಾಂಗ್ರೆಸ್

MLA Muniratna

Sampriya

ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2024 (15:52 IST)
ಬೆಂಗಳೂರು: ಮುನಿರತ್ನ ಕುಕೃತ್ಯಗಳ ಬಂಡಾರ ಬಗೆದಷ್ಟೂ ಹೊರಬರುತ್ತಿವೆ. ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಸ್ಸೆಸ್ಸೆ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ ವಿರುದ್ಧ ಇದೀಗ ಅತ್ಯಾಚಾರ ಕೇಸ್ ದಾಖಲಾಗಿದೆ.

ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ಈ ಎಲ್ಲಾ ವಿಕೃತ ವಿದ್ಯೆಗಳು ಆರ್‌ಸ್ಸೆಸ್ಸೆ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಪ್ರಶ್ನಿಸಿದೆ.

ಪೋಸ್ಟ್‌ನಲ್ಲಿ ಹೀಗಿದೆ: ಮುನಿರತ್ನರ ಹಗರಣಗಳು ಕುಕೃತ್ಯಗಳ ಬಂಡಾರ ಬಗೆದಷ್ಟೂ ಹೊರಬರುತ್ತಿವೆ.

ಮಹಿಳೆಯರನ್ನು ಮಂಚಕ್ಕೆ ಕಳಿಸಿ ಎಂದಿದ್ದಲ್ಲದೆ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು, ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿ ಹನಿಟ್ರಾಪ್ಗೆ ಬಳಸಿಕೊಂಡಿದ್ದು, ವಿರೋಧಿಗಳಿಗೆ ಏಡ್ಸ್ ಹಬ್ಬಿಸಲು ಯತ್ನಿಸಿದ್ದು. ಎಂತೆಂತಹ ವಿಕಾರ, ವಿಕೃತ ಕೃತ್ಯಗಳನ್ನು ಎಸಗಿದ್ದಾರೆ ಎಂದು ಜನಸಾಮಾನ್ಯರು ಊಹಿಸಲೂ ಸಾಧ್ಯವಿಲ್ಲ. ಈ ಎಲ್ಲಾ ವಿಕೃತ ವಿದ್ಯೆಗಳು ಆರ್ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ @BJP4Karnataka
?

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಹರಾಜು