Select Your Language

Notifications

webdunia
webdunia
webdunia
webdunia

ಮುನಿರತ್ನ ಆಡಿಯೋ ಹಿಂದೆ ಸಿಡಿ ಶಿವು ಕೈವಾಡವಿದೆ: ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

DK Shivkumar, Ramesh Jarakiholi

Sampriya

ಚಿಕ್ಕೋಡಿ , ಸೋಮವಾರ, 16 ಸೆಪ್ಟಂಬರ್ 2024 (18:54 IST)
Photo Courtesy X
ಚಿಕ್ಕೋಡಿ: ಗುತ್ತಿಗೆದಾರ ಚಲುವರಾಜುಗೆ ಶಾಸಕ ಮುನಿರತ್ನ ಜೀವಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವುದು ಸಾಬೀತು ಆಗಿಲ್ಲ. ಇದೆಲ್ಲ ಸಿಡಿ ಶಿವ ಕೆಲಸ ಎಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದರು.

ಬಿಜೆಪಿ ಶಾಸಕ ಮುನಿರತ್ನ ಬಂಧನ ಸಂಬಂಧ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ತನ್ನ ಎಲ್ಲ ವಿರೋಧಿಗಳನ್ನು ಜೈಲಿಗೆ ಹಾಕುತ್ತಾನೆ. ಮೊದಲು ನನ್ನನು ಡಿಕೆಶಿ ಕಂಪನಿ ಬಲಿ ಪಡೆಯಿತು. ನಂತರ ದೇವೇಗೌಡರ ಕುಟುಂಬವಾಯಿತು. ಇದೀಗ ಮುನಿರತ್ನ ಅವರನ್ನು ಬಲಿ ಪಡೆದುಕೊಂಡಿದ್ದಾರೆ. ಮುಂದೆ ಡಿಕೆ ಶಿವಕುಮಾರ್ ಬಲಿ ಯಾರೆಂದು ಕಾದು ನೋಡಬೇಕು. ಸಿಡಿ ಶಿವುನಿಂದ  ಕಾಂಗ್ರೆಸ್ ನಾಯಕರು ತೊಂದರೆ ಅನುಭವಿಸುತ್ತಾರೆ ಎಂದರು.

ಮುಂದಿನ ದಿನಗಳಲ್ಲಿ ಸಿಡಿ ದೊಡ್ಡ ಪ್ರಮಾಣದಲ್ಲಿ ಬರಬಹುದು. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರಧಾನಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು.

ಇನ್ನೂ ಮುನಿರತ್ನ ಪರ ಬ್ಯಾಟಿಂಗ್ ಮಾಡಿದ ರಮೇಶ್ ಜಾರಕಿಹೊಳಿ ಅವರು, ನಮ್ಮ ಬಿಜೆಪಿ ನಾಯಕರೇ ನಮ್ಮವರ ವಿರುದ್ಧ ಆಕ್ರೋಶ ಹೊರಹಾಕಿರುವುದು ಎಷ್ಟು ಸರಿ. ಮುನಿರತ್ನ ಬೈದಿರುವುದು ಇನ್ನೂ ಸಾಬೀತಾಗಿಲ್ಲ. ವ್ಯಕ್ತಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ನಮ್ಮವರು ಮಾತನಾಡಬಾರದು ಎಂದರು.

ಆ ಆಡಿಯೋ ಕಟ್ ಆಂಡ್ ಪೇಸ್ಟ್ ಮಾಡಿರಲುಬಹುದು.  ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡುಕಿ ನಿರ್ಧಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನೋಟಿಸ್ ಜಾರಿ ಮಾಡಬೇಕು. ಡಿಕೆ ಶಿವಕುಮಾರ್‌ಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ ಎಂದು ಹರಿಹಾಯ್ದರು.

ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಬಂದಿರುವ ಡಿಕೆ ಶಿವಕುಮಾರ್‌  ಗ್ರಾಮ ಪಂಚಾಯತ್ ಮೆಂಬರ್ ಆಗುವುದಕ್ಕು ಯೋಗ್ಯತೆಯಿಲ್ಲ. ಮುಂದಿನ ಸಲವೂ ಕೂಡ ಡಿಕೆ ಶಿವಕುಮಾರ್ ಸೋಲುತ್ತಾನೆ. ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಎರಡೂವರೆ ಲಕ್ಷ ಮತಗಳಿಂದ ಸೋತ. ಡಿಕೆ ಶಿವಕುಮಾರ್ ಅರ್ಜೆಂಟ್ ಮಾಡಿಕೊಂಡು ಕಾಲಿಗೆ ಬಿದ್ದು ಎಂಎಲ್‌ಎ ಆಗಿದ್ದಾನೆ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಯಾಣ ಕರ್ನಾಟಕ ಜನತೆಗೆ ಹೊಸ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ