Select Your Language

Notifications

webdunia
webdunia
webdunia
webdunia

ಸಿಎಂ ಪೋಸ್ಟ್ ಕ್ಯಾಚ್‌ ಹಾಕ್ಕೊಳ್ಳಿಕ್ಕೆ ಇಷ್ಟು ಫೀಲ್ಡರ್ಸ್‌, ಕೈ ನಾಯಕರ ಕಾಲೆಳೆದ ಆರ್‌ ಅಶೋಕ್

R Ashok
Photo Courtesy R Ashok
ಬೆಂಗಳೂರು: ಕಾಂಗ್ರೆಸ್‌ನಲ್ಲಿ  ಸಿಎಂ ಗದ್ದುಗೆಗಾಗಿ ನಡೆಯುತ್ತಿರುವ ಗುದ್ದಾಟದ ಬಗ್ಗೆ ವಿಪಕ್ಷ ನಾಯಕ ಆರ್‌ ಅಶೋಕ ಲೇವಡಿ ಮಾಡಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿ ಕೈ ನಾಯಕರ ಕಾಲೆಳೆದಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಸಂಚಲನ ಮೂಡಿಸಿದ ಬೆನ್ನಲ್ಲೆ ಮುಖ್ಯಮಂತ್ರಿ ಕುರ್ಚಿ ಮೇಲೆ ಸಚಿವರುಗಳ ಕಣ್ಣು ನೆಟ್ಟಿದೆ.

ಈಗಾಗಲೇ ಸಿಎಂ ರೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ , ಗೃಹಮಂತ್ರಿ ಜಿ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಚೆಗೆ ಸಿಎಂ ಆಕಾಂಕ್ಷಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್‌ ವಿದೇಶಪಾಂಡೆ ಹೇಳಿಕೊಂಡಿದ್ದಾರೆ.

ಇದೀಗ ಕಾಂಗ್ರೆಸ್ ನಾಯಕರ ಕಾಲೆಳೆದು ವಿಪಕ್ಷ ನಾಯಕ ಆರ್‌.ಅಶೋಕ್  ವ್ಯಂಗ್ಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.  ಹೊರಗೆ ಬೆಂಬಲ, ಒಳಗೆ ಹಂಬಲವಿಟ್ಟುಕೊಂಡಿರುವ ಕಾಂಗ್ರೆಸ್ ಮುಂದಾಳುಗಳೆಲ್ಲಾ ಸಿದ್ದರಾಮಯ್ಯನವರು ಕುರ್ಚಿ ಖಾಲಿ ಮಾಡಲಿ, ಸಿಎಂ ಹುದ್ದೆ ತಮಗೆ ದಕ್ಕಲೆಂದು ಕಂಡ ಕಂಡ ಕಡೆ ಕೈಮುಗಿಯುತ್ತಿದ್ದಾರೆ.

ಬಂಡೆಗೆ ಸೆಡ್ಡು ಹೊಡೆದು ಸಿಎಂ ಸ್ಪರ್ಧಾ ಕಣಕ್ಕೆ ಎಂಟ್ರಿ ಕೊಟ್ಟಿರುವ ಆರ್ ವಿ ದೇಶಪಾಂಡೆ ತಾವು ಸಿಎಂ ಆಕಾಂಕ್ಷಿ ಎಂದು ಹೇಳುವ ಮೂಲಕ ಗದ್ದುಗೆಗೆ ಟವಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಪ್ರವಾಹದಿಂದ ಮಾರಣಹೋಮ, ತಡೆಯಲು ವಿಫಲರಾದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ