ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದಿರುವ ಅಪರ್ ಆಧಾರ್ ಐಡಿಯನ್ನು ಮಾಡಿಸುವುದು ನಿಮ್ಮ ಮಕ್ಕಳಿಗೆ ಕಡ್ಡಾಯವೇ? ಇದರ ಉಪಯೋಗವೇನು ಇಲ್ಲಿದೆ ವಿವರ.
ಅಪರ್ ಐಡಿ ಎನ್ನುವುದು ಶಾಲಾ ಶಿಕ್ಷಣ ಮಂಡಳಿಯಿಂದ ಪ್ರತಿ ವಿದ್ಯಾರ್ಥಿಗಳಿಗೆ ನಿಯೋಜಿಸಲಾಗುವ ಅನನ್ಯ ಗುರುತಿಸುವಿಕೆಯಾಗಿದೆ. 12 ಅಂಕಿಗಳ ಈ ಐಡಿ ಸಂಖ್ಯೆಯನ್ನು ಮಕ್ಕಳು ಹೊಂದಿರುವುದು ಕಡ್ಡಾಯವಾಗಿದೆ.
ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಅಪರ್ ಐಡಿ ಎಂಬ ವಿಶಿಷ್ಟ ಗುರುತಿಸನ ಚೀಟಿ ನೀಡಲಾಗುತ್ತಿದೆ.
ಅಪರ್ ಐಡಿ ಎಂದರೇನು
ಆಧಾರ್ ಕಾರ್ಡ್ ನಂತೆಯೇ ಇದೂ ಕೂಡಾ ವಿಶಿಷ್ಟ ಗುರಿತಿನ ಚೀಟಿಯಾಗಿದ್ದು, 12 ಅಂಕಿಗಳ ಐಡಿ ಸಂಖ್ಯೆ ನೀಡಲಾಗುತ್ತದೆ. ಇದು ವಿದ್ಯಾರ್ಥಿ ಜೀವಮಾನ ಗುರುತಿನ ಚೀಟಿಯಾಗಿದೆ. ಮುಂದಿನ ದಿನಗಳಲ್ಲಿ ನೀಟ್, ಸಿಇಟಿಯಂತಹ ಪ್ರವೇಶಾತಿ ಪರೀಕ್ಷೆಗಳು, ಪಬ್ಲಿಕ್ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ಗುರುತಿನ ಚೀಟಿ ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ಅಪರ್ ಐಡಿ ಕಾರ್ಡ್ ಮಾಡಿಸುವುದು ಸೂಕ್ತವಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಆಯಾ ಶಾಲಾ ಮಂಡಳಿಗಳೇ ಇದನ್ನು ಮಾಡಿಸುತ್ತಿವೆ. ಇದಕ್ಕೆ ಪೋಷಕರ ಒಪ್ಪಿಗೆ ಪತ್ರವೊಂದು ಬೇಕಾಗುತ್ತದೆ. ಪೋಷಕರ ಆಧಾರ್ ನಂಬರ್, ಸಹಿಯೊಂದಿಗನ ಫಾರ್ಮ್ ಭರ್ತಿ ಮಾಡಿಕೊಡಬೇಕಾಗುತ್ತದೆ.