ನವದೆಹಲಿ: ದೇಶದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆರ್ ಎಸ್ಎಸ್ ಕಬ್ಜಾ ಮಾಡಿಕೊಂಡಿದೆ. ಹೀಗೇ ಮುಂದುವರಿದರೆ ಮುಂದೆ ಎಲ್ಲಾ ವರ್ಗದವರಿಗೆ ಉದ್ಯೋಗ ಸಿಗದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘವೊಂದರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ಚುಕ್ಕಾಣಿ ಆರ್ ಎಸ್ಎಸ್ ಕೈಯಲ್ಲಿದೆ. ಇದು ಹೀಗೇ ಮುಂದುವರಿದರೆ ಎಲ್ಲಾ ವರ್ಗದವರಿಗೆ ಉದ್ಯೋಗ, ಶಿಕ್ಷಣ ಸಿಗದು ಎಂದಿದ್ದಾರೆ.
ಆರ್ ಎಸ್ಎಸ್ ತನಗೆ ಬೇಕಾದವರನ್ನು ಉಪಕುಲಪತಿಗಳಾಗಿ ನೇಮಿಸುತ್ತಿದೆ. ಇದರಿಂದ ಯುವಜನರ ಭವಿಷ್ಯ ಅಪಾಯದಲ್ಲಿದೆ. ಆರ್ ಎಸ್ಎಸ್ ಕೇವಲ ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ, ಇಡೀ ದೇಶಕ್ಕೇ ಆರ್ ಎಸ್ಎಸ್ ಮಾರಕ ಎಂದಿದ್ದಾರೆ.
ದೇಶದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಆರ್ ಎಸ್ಎಸ್ ಕೈ ಸೇರಿದರೆ ಉದ್ಯೋಗ, ಶಿಕ್ಷಣ ಯಾವುದೂ ಎಲ್ಲಾ ವರ್ಗದವರಿಗೆ ಸಿಗದು. ಮೋದಿ ಕೇವಲ ಕೆಲವು ಶ್ರೀಮಂತ ವರ್ಗದವರ ಉದ್ದಾರ ಮಾಡುವುದನ್ನೇ ಯೋಚಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.