ಬೆಂಗಳೂರು: ಪ್ರತೀ ವರ್ಷವೂ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಬಾಂಧವರೊಂದಿಗೆ ಈದ್ ಮಿಲಾದ್ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಬಾರಿ ಅವರು ಭಾಗಿಯಾಗಿಲ್ಲ. ಇದಕ್ಕೆ ಕಾರಣವೇನೆಂದು ಸಚಿವ ಜಮೀರ್ ಅಹ್ಮದ್ ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷವೂ ಸಿಎಂ ಸಿದ್ದರಾಮಯ್ಯ ಜಮೀರ್ ಅಹ್ಮದ್ ಜೊತೆಗೆ ಚಾಮರಾಜಪೇಟೆಯಲ್ಲಿ ಈದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಟೋಪಿ ಧರಿಸಿ ಸಿದ್ದರಾಮಯ್ಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ಈ ಬಾರಿ ಜಮೀರ್ ಜೊತೆಗೆ ಈದ್ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಮುಸ್ಲಿಂ ಪರ ಎಂಬ ಇಮೇಜ್ ಹೊಂದಿರುವ ಕಾರಣ ಸಿದ್ದರಾಮಯ್ಯ ಅನಗತ್ಯ ವಿವಾದ ಬೇಡವೆಂದು ದೂರ ಸರಿದರಾ ಎಂಬ ಅನುಮಾನಗಳಿತ್ತು. ಅದಕ್ಕೆಲ್ಲಾ ಜಮೀರ್ ತೆರೆ ಎಳೆದಿದ್ದಾರೆ.
ಈವತ್ತು ಬೆಳಿಗ್ಗೆ 9.35 ಕ್ಕೆ ಸಿಎಂ ಫೋನ್ ಮಾಡಿದ್ದರು. ಅವರಿಗೆ ಹುಷಾರಿಲ್ಲದ ಕಾರಣ ಬರಕ್ಕೆ ಆಗಲ್ಲ ಅಂದ್ರು. ಹೀಗಾಗಿ ರಾಜ್ಯ ಮುಖ್ಯಮಂತ್ರಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದೆ ಎಂದಿದ್ದಾರೆ.