ಜೈಪುರ: ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ರಾಜಸ್ಥಾನ್ ನ ಜೈಪುರದಲ್ಲಿ ಮುಸ್ಲಿಂ ಮೆರವಣಿಗೆ ವೇಳೆ ಹಿಂದೂಗಳು ಹೂಮಳೆ ಸುರಿಸುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಈದ್ ಮೆರವಣಿಗೆ, ಗಣೇಶ ಹಬ್ಬದ ಮೆರವಣಿಗೆ ಸಂದರ್ಭ ಕೋಮು ಗಲಭೆಗಳಾಗುವ ಸಾಕಷ್ಟು ಸಂದರ್ಭಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ಹಿಂದೂಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಈದ್ಗಾ ಆಚರಣೆ ನಿಮಿತ್ತ ಜೈಪುರದಲ್ಲಿ ಸಾಕಷ್ಟು ಮುಸ್ಲಿಮರ ಗುಂಪು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಮಹಡಿ ಮೇಲಿನಿಂದ ಹಿಂದೂಗಳು ಹೂ ಹಾಕಿ ಸ್ವಾಗತ ಕೋರಿದ್ದಾರೆ. ಈ ಮೂಲಕ ಈದ್ ಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಕೆಲವು ಕಡೆ ನಿನ್ನೆ ಮತ್ತು ಇನ್ನು ಕೆಲವು ಕಡೆ ಇಂದು ಮುಸ್ಲಿಮರು ಈದ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಈದ್ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಜನ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಅದರ ನಡುವೆ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.