Select Your Language

Notifications

webdunia
webdunia
webdunia
Sunday, 30 March 2025
webdunia

Yogi Adithyanath: ಹಿಂದೂಗಳು ಏನೂ ಅಪಾಯವಾಗದಿದ್ದರೆ ಮುಸ್ಲಿಮರೂ ಸೇಫ್ ಆಗಿರ್ತಾರೆ: ಯೋಗಿ ಆದಿತ್ಯನಾಥ್

Yogi Adithyanath

Krishnaveni K

ಲಕ್ನೋ , ಬುಧವಾರ, 26 ಮಾರ್ಚ್ 2025 (13:10 IST)
ಲಕ್ನೋ: ನಮ್ಮ ರಾಜ್ಯದಲ್ಲಿ ಹಿಂದೂಗಳಿಗೆ ಏನೂ ಅಪಾಯವಾಗದೇ ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸೇಫ್ ಆಗಿ ಇರ್ತಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡಿರುವ ಯೋಗಿ, ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದವರೂ ಸುರಕ್ಷಿತವಾಗಿ ಇದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿಯೇ ಇರ್ತಾರೆ ಎಂದು ಯೋಗಿ ಹೇಳಿದ್ದಾರೆ.

100 ಹಿಂದೂ ಕುಟುಂಬದ ನಡುವೆ ಒಂದು ಮುಸ್ಲಿಂ ಕುಟುಂಬ ಸುರಕ್ಷಿತವಾಗಿರುತ್ತದೆ. ಆದರೆ 100 ಮುಸ್ಲಿಂ ಕುಟುಂಬದ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಹಿಂದೂ ಆಡಳಿತಗಾರರು ಇತರರ ಮೇಲೆ ಆಧಿಪತ್ಯ ಸಾಧಿಸಿದ ಉದಾಹರಣೆಯೇ ಇಲ್ಲ. ಇದಕ್ಕೆ ಬಾಂಗ್ಲಾದೇಶ, ಪಾಕಿಸ್ತಾನವೇ ಉದಾಹರಣೆ ಎಂದಿದ್ದಾರೆ.

ಎಲ್ಲರ ಸಂತೋಷವನ್ನು ಹಾರೈಸುವವನು ನಾನು. 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ. ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ. ಎಲ್ಲರ ಬೆಂಬಲದಿಂದಲೇ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಯುಗಾದಿಗೆ ಮುನ್ನ ಸಿಹಿ ಜೊತೆ ಕಹಿ ಸುದ್ದಿ, ಚಿನ್ನದ ದರ ಎಷ್ಟಾಗಿದೆ ನೋಡಿ