Select Your Language

Notifications

webdunia
webdunia
webdunia
webdunia

ಪಾನ್‌ ಮಸಾಲೆ ತಿಂದು ವಿಧಾನಸಭೆಯ ಧ್ವಾರಕ್ಕೆ ಉಗುಳಿದ ಶಾಸಕನಿಗೆ ಉತ್ತರಪ್ರದೇಶ ಸ್ಪೀಕರ್ ಕ್ಲಾಸ್‌

Uttar Pradesh Speaker Satish Mahana, UP Assembly, Pan Masala

Sampriya

ಉತ್ತರಪ್ರದೇಶ , ಮಂಗಳವಾರ, 4 ಮಾರ್ಚ್ 2025 (19:08 IST)
Photo Courtesy X
ಉತ್ತರ ಪ್ರದೇಶ: ವಿಧಾನಸಭೆಯ ಆವರಣದಲ್ಲಿ ಪಾನ್ ಮಸಾಲ ತಿಂದು ಉಗುಳಿದ ಶಾಸಕನಿಗೆ ಸ್ಪೀಕರ್‌ ಸತೀಶ್ ಮಹಾನ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಲಾದ ಸದಸ್ಯರ ವರ್ತನೆಗೆ ವಿಷಾದಿಸಿದ ಸ್ಪೀಕರ್, "ಇದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ, ಆದರೆ ವಿಧಾನಸಭೆಯ ಸ್ವಚ್ಛತೆಯ ಬಗ್ಗೆ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿಯನ್ನು ಹೊಂದಿದ್ದೇವೆ" ಎಂದು ಹೇಳಿದರು.

ಈ ಅಶಿಸ್ತಿನ ಕೃತ್ಯದ ವೀಡಿಯೋ ಲಭ್ಯವಿದ್ದರೂ ಸಾರ್ವಜನಿಕವಾಗಿ ಸದಸ್ಯರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ ಎಂದು ಸತೀಶ್ ಮಹಾನ ಹೇಳಿದರು. ಆದರೂ ತಪ್ಪಿತಸ್ಥ ಶಾಸಕರ ಮುಂದೆ ಈ ತಪ್ಪನ್ನು ಒಪ್ಪಿಕೊಳ್ಳುವಂತೆ ಹಾಗೂ ತಮ್ಮ ಸಹೋದ್ಯೋಗಿಗಳು ಈ ಕೃತ್ಯ ಎಸಗಿರುವುದು ಕಂಡು ಬಂದಲ್ಲಿ ಅದನ್ನು ನಿಲ್ಲಿಸುವಂತೆ ಎಲ್ಲ ಸದಸ್ಯರಿಗೆ ಮನವಿ ಮಾಡಿದರು.

 ಸ್ಪೀಕರ್ ಸತೀಶ್ ಮಹಾನಾ ಅವರು ವಿಧಾನಸಭೆ ಆವರಣದಲ್ಲಿ ಉಗುಳದಂತೆ ಶಾಸಕರಿಗೆ ಸೂಚನೆ ನೀಡಿದರು. ಮಂಗಳವಾರ ದ್ವಾರದ ಮೇಲೆ ಪಾನ್ ಮಸಾಲಾ ಕಲೆಯನ್ನು ಗಮನಿಸಿದ ನಂತರ ಅವರು ಸೂಚನೆ ನೀಡಲು ಸೂಚಿಸಿದರು.

ಪ್ರವೇಶದ್ವಾರದಲ್ಲಿ ಕಲೆಯನ್ನು ಗುರುತಿಸಿದ ನಂತರ, ಅವರು ತಮ್ಮ ಮೇಲ್ವಿಚಾರಣೆಯಲ್ಲಿ ಭಾಗವನ್ನು ಸ್ವಚ್ಛಗೊಳಿಸಿದರು. ಬಳಿಕ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾನಿ ನರ್ವಾಲ್ ಕೊಲೆ ಪ್ರಕರಣ: ಸೂಟ್‌ಕೇಸ್‌ನಲ್ಲಿ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆ