ಬೆಂಗಳೂರು: ದಕ್ಷಿಣ ಕನ್ನಡದವರಿಗೆ ರಾತ್ರಿ ಎಂಟರ್ ಟೈನ್ ಮೆಂಟ್ ಬೇಕು, ಇಲ್ಲಾಂದ್ರೆ ಮನೆಯಿಂದಾನೇ ಹೊರಗೆ ಬರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇಂದು ಸದನದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಡಿಕೆಶಿ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದರು. ದಕ್ಷಿಣ ಕನ್ನಡದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಅಲ್ಲಿ ಹೆಲ್ತ್ ಟೂರಿಸಂ ಮಾಡಬಹುದು, ಅತೀ ಎಜುಕೇಷನಲ್ ಟೂರಿಸಂ ಮಾಡಬಹುದು, ಧಾರ್ಮಿಕ ಟೂರಿಸಂ ಮಾಡಬಹುದು. ಅತೀ ಹೆಚ್ಚು ಕಾಲೇಜುಗಳು, ಬೀಚ್ ಎಲ್ಲವೂ ಇದೆ. ಆದರೆ ಅಲ್ಲಿ ರಾತ್ರಿ ಆದರೆ ಸಾಕು ಸಿಟಿ ಡೆಡ್ ಆಗಿರುತ್ತದೆ.
ಯುವ ಜನತೆ ಮನೆಯಿಂದಾನೇ ಹೊರಗೆ ಬರಲ್ಲ. ಯಾಕೆಂದರೆ ಅಲ್ಲಿ ರಾತ್ರಿ ಯುವಜನತೆ ಮನೆಯಿಂದ ಹೊರಗೆ ಬರುವಂತೆ ಯಾವುದೇ ಎಂಟರ್ ಟೈನ್ ಮೆಂಟ್ ನಡೆಯಲ್ಲ. ಕೇವಲ ಯಕ್ಷಗಾನ, ಜಾತ್ರೆ, ಧಾರ್ಮಿಕ ಉತ್ಸವ ಬಿಟ್ಟರೆ ರಾತ್ರಿಯಾದರೆ ಸಾಕು ಸಿಟಿ ಡೆಡ್ ಆಗಿಬಿಡುತ್ತದೆ.
ಹೀಗಾಗಿ ದಕ್ಷಿಣ ಕನ್ನಡದ ಎಲ್ಲಾ ಶಾಸಕರಿಗೆ ನಾನು ಮನವಿ ಮಾಡುತ್ತೇನೆ. ಯುವ ಜನತೆ ರಾತ್ರಿ ಮನೆಯಿಂದ ಹೊರಗೆ ಬರುವಂತೆ ಏನು ಮಾಡಬಹುದು ಎಂದು ಎಲ್ಲರೂ ಒಂದು ಮೀಟಿಂಗ್ ಮಾಡಿ ಚರ್ಚೆ ಮಾಡೋಣ ಎಂದಿದ್ದಾರೆ. ಇದಕ್ಕೆ ದಕ್ಷಿಣ ಕನ್ನಡದ ಶಾಸಕರೂ ಸಹಮತಿ ಸೂಚಿಸಿದ್ದಾರೆ. ಇಂತಹದ್ದೊಂದು ಸ್ವಾರಸ್ಯಕರ ಚರ್ಚೆಗೆ ಇಂದು ಸದನ ಸಾಕ್ಷಿಯಾಯಿತು.