ನವದೆಹಲಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಈಗ ಅದ್ಧೂರಿಯಾಗಿ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ. ಮೈದಾನ, ಸ್ಟೇಜ್ ಎಲ್ಲವೂ ರೆಡಿಯಾಗಿದ್ದು, ಅಭ್ಯರ್ಥಿ ಘೋಷಣೆಯೊಂದೇ ಬಾಕಿಯಿದೆ.
									
			
			 
 			
 
 			
					
			        							
								
																	ದೆಹಲಿಯಲ್ಲಿ 70 ವಿಧಾನಸಭೆ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಈಗ ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಇದುವರೆಗೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿಲ್ಲ. ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಮುಗಿಸಿ ಬಂದ ಬಳಿಕ ಘೋಷಣೆಯಾಗಲಿದೆ ಎನ್ನಲಾಗಿತ್ತು.
									
										
								
																	ಅದರಂತೆ ಈಗ ಬಿಜೆಪಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯ ಜವಹರಲಾಲ್ ಸ್ಟೇಡಿಯಂನಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದ್ದು, ಸಾಕಷ್ಟು ಗಣ್ಯರು ಭಾಗಿಯುವಾಗುವ ನಿರೀಕ್ಷೆಯಿದೆ.
									
											
							                     
							
							
			        							
								
																	ಇದರ ಹೊರತಾಗಿ ರಾಮ್ ಲೀಲಾ ಮೈದಾನವನ್ನೂ ಎರಡನೇ ಆಯ್ಕೆಯಾಗಿ ಇಟ್ಟುಕೊಳ್ಳಲಾಗಿದೆ. ಈ ಎರಡು ಮೈದಾನಗಳ ಪೈಕಿ ಒಂದರಲ್ಲಿ ಬಿಜೆಪಿ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇದರ ದಿನಾಂಕವೂ ಶೀಘ್ರದಲ್ಲೇ ಪ್ರಕಟವಾಗಲಿದೆ.