Select Your Language

Notifications

webdunia
webdunia
webdunia
webdunia

ಬೆಳಗಾವಿಯಲ್ಲಿ ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಯುವಕನಿಂದ ಕಲ್ಲು ತೂರಾಟ

Arrest

Krishnaveni K

ಬೆಳಗಾವಿ , ಗುರುವಾರ, 20 ಮಾರ್ಚ್ 2025 (09:22 IST)
ಬೆಳಗಾವಿ: ಜಿಲ್ಲೆಯ ಪಾಂಗುಳ ಗಲ್ಲಿಯಲ್ಲಿ ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣ ನಡೆದಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಅಶ್ವತ್ಥಾಮ ದೇವಾಲಯದಲ್ಲಿ ಘಟನೆ ನಡೆದಿದೆ. ಯಾಶಿರ್ ಎಂಬ ಯುವಕ ಕುಡಿತದ ಅಮಲಿನಲ್ಲಿ ದೇವಾಲಯಕ್ಕೆ ಕಲ್ಲು ಎಸೆದಿದ್ದಾನೆ. ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

ಬಳಿಕ ಎರಡು ಏಟು ಹೊಡೆದು ಪ್ರಶ್ನೆ ಮಾಡಿದಾಗ ತಪ್ಪಾಯ್ತು ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ. ಈ ಹಿಂದೆ ಕೆಲವರು ಬುರ್ಖಾ ಧರಿಸಿ ಡ್ಯಾನ್ಸ್ ಮಾಡುತ್ತಿದ್ದರು. ಅದಕ್ಕೆ ಕಲ್ಲು ಎಸೆದೆ ಎಂದು ಬಾಯ್ಬಿಟ್ಟಿದ್ದಾನೆ. ಕಿಡಿಗೇಡಿಗಳ ಕೃತ್ಯದಿಂದ ಸ್ಥಳದಲ್ಲಿ ಕೋಮುಸಂಘರ್ಷವಾಗಿದೆ.

ತಕ್ಷಣವೇ ಪೊಲೀಸರು ಬಂದಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಿದ್ದಾರೆ. ಇತ್ತೀಚೆಗೆ ಭಾಷಾ ವಿಚಾರದಲ್ಲಿ ಬೆಳಗಾವಿ ಉದ್ವಿಗ್ನವಾಗಿತ್ತು. ಇದೀಗ ಕೋಮುಸಂಘರ್ಷದ ಭೀತಿ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಇಂದೂ ಮಳೆ ಖಚಿತ